ಶನಿವಾರ, ಜೂನ್ 19, 2021
28 °C

ವೃತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತೆ

1. ಬದುಕ ವೃತ್ತದ ಕೇಂದ್ರದಲಿ ಚಂದ್ರನಾರಿ, ಆದಿಶಕ್ತಿಯ ಬಾಲ್ಯ, ಹತ್ತಿಯುಂಡೆಯು ಮೆತ್ತಗೆಜೇನುಗಣ್ಣು, ಕೆಂಗೂದಲು, ಪ್ರತಿ ನಡೆಯಲೂ ಪುಟಿದು ಕುಣಿವ ದಣಿವಿರದ ಉತ್ಸಾಹ

ನೋಡುಗರ ರಸಿಕತೆಯ ಲಂಪಟತೆಯಾಗಿಸುವ ಜೋರಿನ ತೋರ ಜಘನಮಂಟಪ

ಸುತ್ತ ಪರಿಧಿಯ ಮೇಲೆ ಮತ್ತೇರಿ ಬೆಳೆದ ಹತ್ತು ಹಲವು ಗಂಡಸರ ಆಸೆಕಂಗಳ ಹುತ್ತ

ಹುಚ್ಚೆದ್ದು ಕುಣಿವ ಲಂಗು ಲಗಾಮಿಲ್ಲದ ಹಂಗಾಮದ ಕುದುರೆಯೇರಿ ಇವನ ಸವಾರಿ

ಗಾಳಿ ಹಿಡಿಯ ಬಂದವನ ಕಣ್ಣಲ್ಲಿ ದೊಂದಿ, ನರ-ನಾಡಿ-ರೋಮಗಳಲ್ಲಿ ನಾದಸನಾದಿಹಡೆದವರ ಹಂಗು ಹರಕೊಂಡು ಅಮೂರ್ತ ಮಸುಕು ಚಿತ್ರದ ಚುಂಗು ಹಿಡಕೊಂಡು

ಹುಚ್ಚುಗುಂಗಿಯ ಬಲವಾಗಿಸಿಕೊಂಡು ಕಾಲದೇಶಗಳ ಮೇಲೆ ದಾಳಿ ಹೊರಟ ಸವಾರ

ತಿರುವಿನಲಿ ಆ ಹೆಣ್ಣು ಈ ಗಂಡುಗಳ ಮುಖಾಬಿಲೆ. ಬೆಂಕಿಗೆ ಗಾಳಿ ಸೋಕಬಾರದು...

ಗಾಳಿಯಲಿ ಗಾಳಿ ಕರಗಿ, ಬೆಳಕಿನಲಿ ಬೆಳಕು ಬೆಳೆದು, ನೀರೊಳಗೆ ನೀರು ಬೆವರಿ ನಡುಗಿಎದುರಿನವರ ಎಗ್ಗಿಲ್ಲದೆ ಹಾರಿ ಒದೆವ ಇದರ ಉಗುರಿನಲಿ, ಬಾಲದಲಿ, ಜುಲುಪೆಯಲೂ

ಮಲಗಿರುವ ಬೆಂಕಿಯ ಬೀಜಗಳು ಪಟ್‌ಪಟಾರೆಂದು ಸಿಡಿದು ಬೆಂಕಿ ಮೊಳೆತು ಬೆಳಕಾಗಿ

ಚಂದ್ರನಾರಿಯ ಕಣ್ಣಮಿಂಚಿನಲೂ ಮೊಳೆಯಲು ಕಾದಿರುವ ಸಣ್ಣವನೇಕ ಬೆಳಕ ಬೀಜಗಳುಈ ಬದುಕ ಚದುರಂಗ ವೃತ್ತದಲಿ ಕೇಂದ್ರ-ಪರಿಧಿಗಳು ಸಂಧಿಸಿ ಒಂದು ತ್ರಿಜ್ಯದ ಉದಯ2. ಹತ್ತಿರ ಬಂದಾಗಲೇ ಹತ್ತಿಯುಂಡೆಯು ಹಿಮದ ಬಂಡೆಯಂತೆ ತಂಪು ತಂಪು ಕಲ್ಲು ಕಲ್ಲುಹೆಣ್ಣಿನ ಕಣ್ಣಿನ ಸನ್ನೆ ಮಾತ್ರಕೇ ಮಣ್ಣಿನ ಮಕ್ಕಳು ಸಣ್ಣಾದಂತೆ ಸುಖಾಸುಮ್ಮನೆ ಸುಣ್ಣಾದಂತೆಒಂದು ವೃತ್ತದಲಿ ಅಸಂಖ್ಯ ತ್ರಿಜ್ಯಗಳು ಒಂದೇ ನಿಶ್ಚಲ ಕೇಂದ್ರದೆಡೆ ಮುಖ ಮಾಡಿ ನಡೆದಿವೆಕಣ್ಣಿಗೆ ನುಣ್ಣಗೆ ಕಂಡ ಮುದ್ದುಮೊಲ. ಮೈಮೇಲೆ ಹರಡಿದೆ ಅಹಂಕಾರದ ತುಪ್ಪಳಗೂದಲುಕಣ್ಸೆಳೆವ ಸೌಂದರ್ಯದಡಿಯಲೇ ಮಾರಣಾಂತಿಕ ಅಪಾಯವನಡಗಿಸಿಡಲಾಗಿದೆ. ನಿಯಮ.ಗಂಡಾದ ತಪ್ಪಿಗೆ ಗುಂಡಿಗೆ ಪಣಕಿಟ್ಟು ಅನುಭವಿಸಬೇಕು- ಅಪಾಯವನೂ, ಆನಂದವನೂತನ್ನತನವ ತಾ ಮರೆತು ಪ್ರಕತಿಗೆ ತಲೆ ಬಾಗಲೇಬೇಕು. ಜಗದಿ ನಿಜದಲಿ ಪುರುಷನೇ ಅಬಲ3. ಹೂಗಳ ಬದಲಿಗೆ ನಡುವೆ ಹಳದಿ ಚಾಕು ಅರಳಿದೆ ರಕ್ತಕೆಂಪು ಗುಟ್ಟಿನ ತೊಟ್ಟು ಸೀಳಿಕೊಂಡುತರಡು ಹೊಡೆಸಿಕೊಂಡ ಹೋರಿ ಮಲಗಿದೆ ಮುಲುಗುತ್ತ ಮೂಲೆಯಲಿ. ಕುಂದಿದ ಶಕ್ತಿ, ಆಸಕ್ತಿ.ತಾರೆಗಳ ಹುರಿದು ತಿಂದು ಸಿಪ್ಪೆ ಬಿಸುಟು ತೃಪ್ತಿಯಲಿ ತೇಗುತಿರುವ ಚಂದ್ರನಾರಿಯ ಚಂಚಲಚಿತ್ತಅವಳ ಕೊಬ್ಬು ತುಂಬಿದ ಉಬ್ಬುಗಳ ಕರಗಿಸಿ ಮಬ್ಬಳಿಸಲು ಆಚೆ ಪರಿಧಿಲಿ ಬೇರೊಂದು ನೆರಳುರಾಗದ ರೋಗಿಗೆ ರೋಗವೇ ರಾಗವಾಗಿ ಎದುರಾಗಿ...4. ಉಭಯಪಾರ್ಶ್ವದ ಪರಿಧಿಬಿಂದುಗಳು ಒಂದೇ ಕೇಂದ್ರಕೆ ಹಂಬಲಿಸಿ ವ್ಯಾಸವು ವೃತ್ತಕೆ ಉರಿಬೆಂಕಿಕೇಂದ್ರದ ಹಂಗಿರದೆ ಪರಿಧಿಬಿಂದುಗಳೆರಡು ಸೇರಿ ನಡೆದಿದೆ ಜಗದಲಿ ಎಗ್ಗಿಲ್ಲದೆ ಜ್ಯಾಗಳ ಜನನಹಾಗೋ ಹೀಗೋ ಅಂತೂ

ಗೋಳ ಹೋಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.