ವೃತ್ತದಲ್ಲಿ ಮಾರಾಟ ಮಳಿಗೆ: ಸಂಚಾರಕ್ಕೆ ಅಡ್ಡಿ

7

ವೃತ್ತದಲ್ಲಿ ಮಾರಾಟ ಮಳಿಗೆ: ಸಂಚಾರಕ್ಕೆ ಅಡ್ಡಿ

Published:
Updated:
ವೃತ್ತದಲ್ಲಿ ಮಾರಾಟ ಮಳಿಗೆ: ಸಂಚಾರಕ್ಕೆ ಅಡ್ಡಿ

ಹುಣಸೂರು: ಪಟ್ಟಣದ ರೋಟರಿ ವೃತ್ತದಲ್ಲಿ ಖಾಸಗಿ ಕಂಪೆನಿ ಅನುಮತಿ ಇಲ್ಲದೇ ದ್ವಿಚಕ್ರ ಮಾರಾಟ ಮತ್ತು ಪ್ರದರ್ಶನಕ್ಕೆ ತಾತ್ಕಾಲಿಕ ಮಳಿಗೆ ನಿರ್ಮಿಸಿದೆ. ಇದರಿಂದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ರೋಟರಿ ವೃತ್ತಕ್ಕೆ ಹೊಂದಿಕೊಂಡಿರುವ ಈ ದ್ವಿಚಕ್ರ ವಾಹನ ಮಾರಾಟ ಮತ್ತು ಪ್ರದರ್ಶನ ಮಳಿಗೆಯು ವೃತ್ತವನ್ನು ಸಂಪೂರ್ಣ ಆಕ್ರಮಿಸಿಕೊಂಡಿದೆ. ವಾಹನ ಖರೀದಿಸುವ ಗ್ರಾಹಕರು ರಸ್ತೆಯಲ್ಲೇ ನಿಂತು ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಟ್ಟಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭಾಗದಿಂದ ಬರುವ ವಾಹನಗಳು ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್‌ಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಚಾರ ನಿಯಂತ್ರಿಸಬೇಕಿರುವ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.ಈ ಬಗ್ಗೆ ಪ್ರತಿಕ್ರಿಸಿರುವ ಪುರಸಭೆ ಮುಖ್ಯಾಧಿಕಾರಿ ಹರೀಶ್ ಅವರು, `ರೋಟರಿ ವೃತ್ತದಲ್ಲಿ ದ್ವಿಚಕ್ರ ವಾಹನ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿಲ್ಲ. ಅನಧಿಕೃತವಾಗಿ ಟೆಂಟ್ ನಿರ್ಮಿಸಿ ವಹಿವಾಟು ನಡೆಸಿದ್ದಾರೆ~ ಎಂದು ಸ್ಪಷ್ಟಪಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry