ಗುರುವಾರ , ಜೂನ್ 17, 2021
22 °C

ವೃತ್ತಿಪರತೆಯ ಕೊರತೆ: ಉದ್ಯೋಗ ಲಭ್ಯತೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭಾರತದ ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರೂ ವೃತ್ತಿಪರತೆಯ ಕೊರತೆಯಿಂದಾಗಿ ಉದ್ಯೋಗ ಲಭ್ಯತೆಗೆ ಹಿನ್ನಡೆಯಾಗುತ್ತಿದೆ~ ಎಂದು ಸಿಂಗಾಪುರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಆರ್.ತೆಯ್ವೆಂದ್ರನ್ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭಾರತದಲ್ಲಿ 2015 ರ ವೇಳೆಗೆ ಶಿಕ್ಷಣ ಕ್ಷೇತ್ರದ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಲಿದೆ. ಸಿಂಗಾಪುರದಲ್ಲಿ ಶಿಕ್ಷಣ ಪಡೆಯಲು ಭಾರತದ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ.

ಸಿಂಗಾಪುರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯು ಉತ್ತಮ ಶಿಕ್ಷಣದ ಜೊತೆಗೆ ವಸತಿ ವ್ಯವಸ್ಥೆಯನ್ನೂ ಒದಗಿಸುತ್ತಿದೆ. ಜಗತ್ತಿನ ಒಂಬತ್ತು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ~ ಎಂದು ಅವರು ತಿಳಿಸಿದರು.

`ವೇಲ್ಸ್ ವಿಶ್ವವಿದ್ಯಾಲಯದ ಜೊತೆಗೆ ಹೊಸ ಶಿಕ್ಷಣ ಕ್ರಮಗಳನ್ನು ಸಂಸ್ಥೆಯು ಆರಂಭಿಸಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಕ್ರಮಗಳಿಗೆ ವಿಶೇಷವಾದ ವಿದ್ಯಾರ್ಥಿ ವೇತನಗಳ ಅವಕಾಶವೂ ಲಭ್ಯವಿದೆ~ ಎಂದು ಅವರು ತಿಳಿಸಿದರು.

ವೇಲ್ಸ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಮಾರ್ಕ್ ನರುಸ್ ಬರ್ಗ್ ಮಾತನಾಡಿ, `ವೇಲ್ಸ್ ವಿಶ್ವವಿದ್ಯಾಲಯವು ಸಂಸ್ಥೆಯ ಜೊತೆಗೆ ಆರಂಭಿಸಿರುವ ಈ ಹಿಂದಿನ ಅನೇಕ ಕೋರ್ಸ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.