ಮಂಗಳವಾರ, ಮೇ 24, 2022
22 °C

ವೃತ್ತಿಪರರ ಸೃಷ್ಟಿಗೆ ಅಭಿವೃದ್ಧಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಿಗೆ ವೃತ್ತಿಪರರನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹೈದರಾಬಾದ್ ಮೂಲದ `ಟ್ಯಾಲೆಂಟ್ ಸ್ಪ್ರಿಂಟ್~ ಕಂಪೆನಿಯು ನಗರದಲ್ಲಿ `ಬೆಂಗಳೂರು ನೈಪುಣ್ಯ ಮತ್ತು ಉದ್ಯೋಗ ಸಾಮರ್ಥ್ಯ ಅಭಿವೃದ್ಧಿ ಕೇಂದ್ರ~ವನ್ನು ತೆರೆದಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ಯಾಲೆಂಟ್ ಸ್ಪ್ರಿಂಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಶಂತನು ಪಾಲ್, `ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಆವರಣದಲ್ಲಿ ನೂತನ ಕೇಂದ್ರವು ಕಾರ್ಯನಿರ್ವಹಿಸಲಿದೆ~ ಎಂದರು. `ಕಂಪೆನಿಯು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಗ್ಲೋಬಲ್ ಟ್ಯಾಲೆಂಟ್ ಅಕಾಡೆಮಿ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ~ ಎಂದು ತಿಳಿಸಿದರು.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಮಾತನಾಡಿ, `ಟ್ಯಾಲೆಂಟ್ ಸ್ಪ್ರಿಂಟ್ ಸ್ಥಾಪಿಸಲಿರುವ ಕೇಂದ್ರದ ವತಿಯಿಂದ ರಾಜ್ಯದಲ್ಲಿ 2020ರ ಒಳಗೆ ಐದು ಲಕ್ಷ ವೃತ್ತಿಪರರನ್ನು ಸಜ್ಜುಗೊಳಿಸುವ ಗುರಿ ಇದೆ~ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.