ವೃತ್ತಿಪರ ಗಾಲ್ಫರ್ ಆದ ರಾಹುಲ್

7

ವೃತ್ತಿಪರ ಗಾಲ್ಫರ್ ಆದ ರಾಹುಲ್

Published:
Updated:

ನವದೆಹಲಿ (ಪಿಟಿಐ): ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ತಂಡದಲ್ಲಿದ್ದ ರಾಹುಲ್ ಬಜಾಜ್ ಅವರು ಈಗ ವೃತ್ತಿಪರ ಗಾಲ್ಫರ್ ಆಗಿ ಪರಿವರ್ತನೆಗೊಂಡಿದ್ದಾರೆ.

ಗುರುವಾರ ಇಲ್ಲಿ ಆರಂಭವಾಗಲಿರುವ 1.25 ದಶಲಕ್ಷ ಡಾಲರ್ ಬಹುಮಾನ ಮೊತ್ತದ ಹೀರೊ ಹೊಂಡಾ ಕಪ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಮೂಲಕ ಅವರು ತಮ್ಮ ವೃತ್ತಿಪರ ಗಾಲ್ಫ್ ಜೀವನವನ್ನು ಆರಂಭಿಸಲಿದ್ದಾರೆ.

ರಶೀದ್ ಖಾನ್, ಅಭಿನವ್ ಲೋಹನ್ ಹಾಗೂ ಅಭಿಜಿತ್ ಚಡ್ಡಾ ಅವರೊಂದಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅವರು ಇನ್ನು ಮುಂದೆ ವೃತ್ತಿಪರ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry