ವೃತ್ತಿ ಭದ್ರತೆ ಇಲ್ಲ

7

ವೃತ್ತಿ ಭದ್ರತೆ ಇಲ್ಲ

Published:
Updated:

ಬೆಂಗಳೂರು: `ಮನೋವೈದ್ಯರಿಗೆ ವೃತ್ತಿ ಭದ್ರತೆ ಒದಗಿಸಲು ಕಾಯ್ದೆ ತರಬೇಕೆಂದು ಅಂದಿನ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರಲ್ಲಿ ಮನವಿ ಮಾಡಿದ್ದೆ. ಆದರೆ ಅದು ಜಾರಿಯಾಗಿಲ್ಲ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಷಾದಿಸಿದರು.ಕಡಬಮ್ಸ ಸಮೂಹ ಸಂಸ್ಥೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಅನ್ವೇಷ- 2011~ ಸ್ಪರ್ಧೆ ಸಮಾರೋಪದಲ್ಲಿ  ಮಾತನಾಡಿದರು.`ಚಿಕಿತ್ಸೆಗಳು ವಾಣಿಜ್ಯೀಕರಣವಾಗಿರುವ ಈ ದಿನಗಳಲ್ಲಿ ಸಂಸ್ಥೆಯು ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆಯೊಂದಿಗೆ ಸಾಮಾಜಿಕ ಭದ್ರತೆ ಒದಗಿಸುತ್ತಿರುವುದು ಶ್ಲಾಘನೀಯ~ ಎಂದರು. ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, `ಮಾನಸಿಕ ಅಸ್ವಸ್ಥರಿಗಾಗಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಉತ್ತಮ ಆಸ್ಪತ್ರೆಗಳು ನಿರ್ಮಾಣಗೊಳ್ಳಬೆಕಿದೆ~ ಎಂದರು.ಡಾ.ಆನಂದ ಪಾಂಡುರಂಗಿ ಮತ್ತು ಡಾ.ಎಂ.ರಂಗನಾಥನ್ ಅವರಿಗೆ ಮಾನಸಿಕ ಆರೋಗ್ಯ ವೃತ್ತಿ ಪ್ರಶಸ್ತಿ ನೀಡಲಾಯಿತು. ಮಾನಸಿಕ ಅಸ್ವಸ್ಥರ ಪ್ರತಿಭಾ ಅನ್ವೇಷ ಸ್ಪರ್ಧೆಯಲ್ಲಿ ಶಿವಮೊಗ್ಗದ `ಮಾನಸಧಾರಾ~ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವು ಪ್ರಥಮ ಪ್ರಶಸ್ತಿ ಪಡೆದುಕೊಂಡಿತು. ಡಾ.ಪಿ.ಸತೀಶ್ ಚಂದ್ರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಮೂಹ ಸಂಸ್ಥೆಯ ಅಧ್ಯಕ್ಷ ರಮೇಶ್ ಕಡಬಮ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry