ವೃತ್ತಿ ಶಿಕ್ಷಣದಲ್ಲಿ ರಾಜ್ಯ ಮುಂಚೂಣಿ: ಆಚಾರ್ಯ

7

ವೃತ್ತಿ ಶಿಕ್ಷಣದಲ್ಲಿ ರಾಜ್ಯ ಮುಂಚೂಣಿ: ಆಚಾರ್ಯ

Published:
Updated:

ಸುಳ್ಯ: ದೇಶದಲ್ಲಿಯೇ ಅತೀ ಹೆಚ್ಚು ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು. ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ  ಸಮಾರಂಭದಲ್ಲಿ ಪದವಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು. ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಖಾಸಗಿ ಸಹಭಾಗಿತ್ವ ಕೂಡ ರಾಜ್ಯಕ್ಕೆ ಲಭಿಸಿದೆ. ಇನ್ನೂ ಕೂಡಾ ಖಾಸಗಿ ಸಹಭಾಗಿತ್ವದಲ್ಲಿ ಇನ್ನಷ್ಟೂ ಸಾಧನೆ ತೋರಬೇಕಾಗಿದೆ. ವೈದ್ಯಕೀಯ ರಂಗ ಇಂದು ಸಾಕಷ್ಟು ಆಧುನೀಕರಣಗೊಂಡಿದೆ. ಸಾಮಾನ್ಯ ಜನರಿಗೂ ಆಧುನಿಕ ಸೌಲಭ್ಯಗಳು ತಲುಪುತ್ತಿವೆ. ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ ಎಂದರು.ಯುವ ವೈದ್ಯರು ತಮ್ಮ ವೃತ್ತಿ ಸೇವೆಯನ್ನು ಸಾಮಾಜಿಕ ಕಳಕಳಿಯೊಂದಿಗೆ ಮಾಡಬೇಕು. ಜನತೆಯ ಗೌರವಕ್ಕೆ ಪಾತ್ರರಾಗುವಂತಹ ಕೆಲಸ ಮಾಡಿ ಎಂದರು.  ಪ್ರಧಾನ ಭಾಷಣ ಮಾಡಿದ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಾಂತಾರಾಮ ಶೆಟ್ಟಿ,  ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಹೊಸ ವಿಷಯ, ಆವಿಷ್ಕಾರಗಳನ್ನು ಅರಿತು ಸ್ವಾಸ್ಥ ಸಮಾಜಕ್ಕಾಗಿ ಅರ್ಪಿಸಬೇಕು ಎಂದರು.ಬೆಂಗಳೂರು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ವಸಂತಕುಮಾರ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟರಮಣ ಗೌಡ,  ಉಪಾಧ್ಯಕ್ಷ  ಡಾ.ಕೆ.ವಿ.ಚಿದಾನಂದ, ಅಕಾಡೆಮಿ ಖಜಾಂಜಿ ಶೋಭಾ ಚಿದಾನಂದ, ನಿರ್ದೇಶಕರಾದ ಪಡ್ಡಂಬೈಲು ವೆಂಕಟರಮಣ ಗೌಡ, ಕೆ.ವಿ.ಹೇಮನಾಥ್, ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಮಕೃಷ್ಣ, ಡಾ.ಕಾರ್ಯಪ್ಪ, ಡಾ.ಯು.ಕೆ ರಾವ್, ಕಾಲೇಜಿನ ಪ್ರಾಂಶುಪಾಲೆ ಡಾ, ಶೀಲಾ ಜಿ.ನಾಯಕ್, ಡಾ.ಸಿ.ಆರ್.ಭಟ್, ಡಾ.ಅನಿಲ್, ಡಾ.ರಾಜು, ಪ್ರಿಯಾಂಕ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry