ವೃದ್ಧಾಶ್ರಮವಾಯ್ತು ಹಳ್ಳಿ: ಶಾಸಕ ವಿಷಾದ

7

ವೃದ್ಧಾಶ್ರಮವಾಯ್ತು ಹಳ್ಳಿ: ಶಾಸಕ ವಿಷಾದ

Published:
Updated:

ಮಧುಗಿರಿ: ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನಲ್ಲಿ ಜನತೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಹಳ್ಳಿಗಳಲ್ಲಿ ಉದ್ಯೋಗ ಸಿಗದ ಕಾರಣ ಯುವಕರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಶಾಸಕ ಕೆ.ಎನ್.ರಾಜಣ್ಣ ವಿಷಾದಿಸಿದರು.ಕೋಡಿಗೇನಹಳ್ಳಿ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಮತ್ತು ಖಾತಾ ಆಂದೋಲನ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳದಿದ್ದರೆ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಕುರಿತು ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು ಎಂದರು.ತಾಲ್ಲೂಕು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು. ಉಪಸಾರಿಗೆ ಕಚೇರಿ, ರಸ್ತೆ ದುರಸ್ತಿಯಂಥ ಕೆಲಸಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಸ್ಥಾಪನೆ, ವಿದ್ಯುತ್, ಉತ್ತಮ ರಸ್ತೆ, ಕೈಗಾರಿಕೆ ಅಭಿಯಾನ ಪ್ರಾರಂಭಿಸಲಾಗುವುದು ಎಂದರು.ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿ.ಪಂ ಸದಸ್ಯ ಕೆಂಚಮಾರಯ್ಯ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಆಹಾರ ಇಲಾಖೆ ಉಪನಿರ್ದೇಶಕ ರಾಮಪ್ಪ, ಲೀಡ್ ಬ್ಯಾಂಕ್ ಅಧಿಕಾರಿ ಜಯರಾಮಯ್ಯ, ಉಪವಿಭಾಗಾಧಿಕಾರಿ ತಬಸಮ್ ಜಹೇರಾ, ಜಿ.ಪಂ ಸದಸ್ಯರಾದ ಶಾಂತಲಾ ರಾಜಣ್ಣ, ಮಂಜುಳಾ, ತಾ.ಪಂ ಅಧ್ಯಕ್ಷೆ ಯಶೋಧಾ, ಉಪಾಧ್ಯಕ್ಷೆ ಸಿದ್ದಗಂಗಾಂಬಿಕೆ, ತಹಶೀಲ್ದಾರ್ ಕೆ.ರಮೇಶ್, ಕಾರ್ಯನಿರ್ವಹಣಾಧಿಕಾರಿ ಮಹಾಲಿಂಗಯ್ಯ ಮುಖಂಡರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಂ.ಜಿ.ಶ್ರೀನಿವಾಸಮೂರ್ತಿ, ರಾಮಣ್ಣ, ಎಸ್.ಡಿ.ಕೃಷ್ಣಪ್ಪ, ಚಿಕ್ಕಓಬರೆಡ್ಡಿ, ಪಂಚಾಕ್ಷರಿ, ಅರುಣಕುಮಾರಿ, ಆರ್.ಐ ಸಿದ್ದರಾಜ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry