ವೃದ್ಧಾಶ್ರಮ ನಿರ್ಮಾಣಕ್ಕೆ ಏಕಾಂಗಿ ಹೋರಾಟ

ಶುಕ್ರವಾರ, ಮೇ 24, 2019
22 °C

ವೃದ್ಧಾಶ್ರಮ ನಿರ್ಮಾಣಕ್ಕೆ ಏಕಾಂಗಿ ಹೋರಾಟ

Published:
Updated:

ತುಮಕೂರು: ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿ ಸುದ್ದೇಕುಂಟೆ ಗ್ರಾಮದಲ್ಲಿ ವೃದ್ಧಾಶ್ರಮ ಸ್ಥಾಪಿಸುವ ಕನಸು ಹೊತ್ತಿರುವ ರುಕ್ಮಿಣಿದೇವಿ (83) ಅನೇಕ ವರ್ಷಗಳಿಂದ ಅವಿರತ ಏಕಾಂಗಿ ಹೋರಾಟ ನಡೆಸಿದ್ದಾರೆ.`ಗ್ರಾಮೀಣ ಭಾರತ ಇಂದು ಬದ ಲಾಗಿದೆ. ಎಲ್ಲಿಯೂ ವೃದ್ಧರಿಗೆ ಮರ್ಯಾದೆಯಿಲ್ಲ. ಅವರನ್ನು ಅನುತ್ಪಾದಕ ಆಸ್ತಿ ಎಂಬಂತೆ ನೋಡು ತ್ತಾರೆ. ಅಂಥವರಿಗೆ ನೆರವಾಗುವ ಉದ್ದೇಶ ದಿಂದ ತೀರ ಒಳ ಪ್ರದೇಶದಲ್ಲಿ ವೃದ್ಧಾಶ್ರಮ ನಿರ್ಮಿಸಬೇಕೆಂಬ ಹಂಬಲ ದಿಂದ ವೃದ್ಧಾಶ್ರಮ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ~ ಎಂದು ರುಕ್ಮಿಣಿದೇವಿ `ಪ್ರಜಾವಾಣಿ~ಗೆ ತಿಳಿಸಿದರು.`ನನ್ನ ಕೈಲಿದ್ದ ಎಲ್ಲ ಹಣವನ್ನೂ (ರೂ. 17 ಲಕ್ಷ) ವೃದ್ಧಾಶ್ರಮ ನಿರ್ಮಾಣಕ್ಕೆ ವ್ಯಯಿಸಿದ್ದೇನೆ. ಇನ್ನೂ ರೂ. 7 ಲಕ್ಷ ಬೇಕು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಸುದ್ದೆಕುಂಟೆ ಸಮೀಪ 2 ಎಕರೆ ಭೂಮಿ ಖರೀದಿಸಿ, 11 ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಕಟ್ಟಡದ ಪ್ಲಾಸ್ಟಿಂಗ್, ಫ್ಲೋರಿಂಗ್ ಆಗಿಲ್ಲ. ಗುರುವಾರವಷ್ಟೇ ಸಂಸದರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ~ ಎಂದರು.`ನನಗೂ ವಯಸ್ಸಾಯಿತು. ನನ್ನ ಜೀವಿತಾವಧಿಯಲ್ಲಿ ವೃದ್ಧಾಶ್ರಮ ನಿರ್ಮಿಸಿ, ಸ್ಥಳೀಯರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಆಶ್ರಮದ ಉಸ್ತುವಾರಿಯನ್ನು ಅವರಿಗೇ ವಹಿಸಿ ಕಣ್ಮುಚ್ಚಬೇಕೆಂಬುದು ನನ್ನ ಆಸೆ. ನನ್ನ ಎಲ್ಲ ಆಸ್ತಿಯನ್ನೂ ವೃದ್ಧಾಶ್ರಮದ ಹೆಸರಿಗೆ ಬರೆಯುತ್ತೇನೆ. ನನ್ನ ಕುಟುಂಬದ ಯಾರೊಬ್ಬರನ್ನೂ ಸಮಿತಿಯಲ್ಲಿ ಸೇರಿಸುವುದಿಲ್ಲ~ ಎಂದು ಹೇಳಿದರು. ಸಂಪರ್ಕ ಸಂಖ್ಯೆ 9886244480.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry