ವೆಂಕಟರಮಣಸ್ವಾಮಿ ಜಾತ್ರೆ ಇಂದು

7

ವೆಂಕಟರಮಣಸ್ವಾಮಿ ಜಾತ್ರೆ ಇಂದು

Published:
Updated:
ವೆಂಕಟರಮಣಸ್ವಾಮಿ ಜಾತ್ರೆ ಇಂದು

ಕೃಷ್ಣರಾಜಪೇಟೆ: ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಏಳು ಕಿಲೊ ಮೀಟರ್ ದೂರದಲ್ಲಿರುವ ಪುರಾಣ ಪ್ರಸಿದ್ಧ  ಸ್ಥಳವಾದ ಹೇಮಗಿರಿ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಜೀವನದಿ ಹೇಮಾವತಿಯ ತಟದಲ್ಲಿರುವ ಈ ಸ್ಥಳ ಸುಂದರ ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ. ಇಲ್ಲಿನ ಪುಟ್ಟ ಗುಡ್ಡದ ಮೇಲೆ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯವಿದೆ. ರಥಸಪ್ತಮಿಯ ದಿನವಾದ ಫೆಬ್ರುವರಿ17 ರಂದು ರಥೋತ್ಸವ ನಡೆಯಲಿದೆ.ಹೇಮ ಅಥವಾ ಚಿನ್ನದಿಂದ ಕೂಡಿದ ಬೆಟ್ಟ ಇದಾಗಿದೆ ಎಂಬ ಕಥೆ ಪ್ರಚಲಿತದಲ್ಲಿದೆ. ಪೌರಾಣಿಕ ಹಿನ್ನೆಲೆಯುಳ್ಳ ಈ ಸ್ಥಳದ ಬಗ್ಗೆ ವಿವಿಧ ಐತಿಹ್ಯಗಳಿವೆ. ವಿಷ್ಣುವು ವೈಕುಂಠದಲ್ಲಿ ಬೇಸರಗೊಂಡಾಗ ವಿಶ್ರಾಂತಿಗಾಗಿ ಇಲ್ಲಿಗೆ ಬರುತ್ತಿದ್ದ ಎಂಬ ಸ್ಥಳಗಥೆಯಿದೆ. ಅಲ್ಲದೆ ಇಲ್ಲಿಯೇ ಹಿಂದೆ ಭೃಗು ಮಹರ್ಷಿಗಳು ತಪಸ್ಸು ಮಾಡಿದ್ದರು ಎಂದು ಹೇಳಲಾಗುವ ಗುಹೆಯೂ ಇದೆ.ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳ ಜಾತ್ರೆ ಸಹ ನಡೆಯುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ರಾಸುಗಳ ಖರೀದಿಗೆ ವ್ಯಾಪಾರಿಗಳು ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಸಂಪ್ರದಾಯವೂ ಇದೆ. ಈಚೆಗೆ ಉಚಿತ ಸಾಮೂಹಿಕ ವಿವಾಹಗಳನ್ನೂ ನಡೆಸಲಾಗುತ್ತಿದೆ.ಹೇಮಾವತಿ ನದಿಯ ಪ್ರಶಾಂತ ವಾತಾವರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೇಕ ಅಪರೂಪದ ಪಕ್ಷಿಗಳು ನೆಲೆ ಮಾಡಿಕೊಂಡಿವೆ. ಪ್ರಮುಖವಾಗಿ ಪೆಲಿಕಾನ್, ನೈಟ್‌ಹೆರಾನ್, ನೀರುಕಾಗೆ ಮತ್ತಿತರ ಪಕ್ಷಿಗಳು ನದಿಯ ಮಧ್ಯಭಾಗದಲ್ಲಿರುವ ನಡುಗಡ್ಡೆಗಳ ಮರಗಳ ಮೇಲೆ ಗೂಡುಕಟ್ಟಿಕೊಂಡು ತಮ್ಮ ಸಂತಾನಾಭಿವೃದ್ದಿಗೆ ಆಗಮಿಸುತ್ತವೆ. ಅವುಗಳನ್ನೂ ವೀಕ್ಷಿಸಬಹುದು.ಈ ಭಾಗದ ಶಕ್ತಿ ದೇವತೆ ಚಂದುಗೋನಹಳ್ಳಿ ಅಮ್ಮನ ದೇವಾಲಯವಿದೆ. ಆದಿಚುಂಚನಗಿರಿ ಮಠದ ಶಾಖಾಮಠವೂ ಸಹ ಇಲ್ಲಿದೆ. ಸಮೀಪದಲ್ಲಿಯೇ ತ್ರಿಶೂಲ್ ಪವರ್ ಕಾರ್ಪೊರೇಷನ್‌ನ  ಕಿರು ವಿದ್ಯುತ್ ಉತ್ಪಾದನಾ ಘಟಕವು ಸಹ ಇದೆ.ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಈ ಸುಂದರ ತಾಣದಲ್ಲಿ ಯಾತ್ರಿಗಳ ತಂಗುವಿಕೆಗೆ ಸೂಕ್ತ ಮೂಲ ಸೌಕರ್ಯ ಒದಗಿಸಬೇಕು ಷಕೃಷ್ಣರಾಜಪೇಟೆ: ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಏಳು ಕಿಲೊ ಮೀಟರ್ ದೂರದಲ್ಲಿರುವ ಪುರಾಣ ಪ್ರಸಿದ್ಧ  ಸ್ಥಳವಾದ ಹೇಮಗಿರಿ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಜೀವನದಿ ಹೇಮಾವತಿಯ ತಟದಲ್ಲಿರುವ ಈ ಸ್ಥಳ ಸುಂದರ ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ. ಇಲ್ಲಿನ ಪುಟ್ಟ ಗುಡ್ಡದ ಮೇಲೆ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯವಿದೆ. ರಥಸಪ್ತಮಿಯ ದಿನವಾದ ಫೆಬ್ರುವರಿ17 ರಂದು ರಥೋತ್ಸವ ನಡೆಯಲಿದೆ.ಹೇಮ ಅಥವಾ ಚಿನ್ನದಿಂದ ಕೂಡಿದ ಬೆಟ್ಟ ಇದಾಗಿದೆ ಎಂಬ ಕಥೆ ಪ್ರಚಲಿತದಲ್ಲಿದೆ. ಪೌರಾಣಿಕ ಹಿನ್ನೆಲೆಯುಳ್ಳ ಈ ಸ್ಥಳದ ಬಗ್ಗೆ ವಿವಿಧ ಐತಿಹ್ಯಗಳಿವೆ. ವಿಷ್ಣುವು ವೈಕುಂಠದಲ್ಲಿ ಬೇಸರಗೊಂಡಾಗ ವಿಶ್ರಾಂತಿಗಾಗಿ ಇಲ್ಲಿಗೆ ಬರುತ್ತಿದ್ದ ಎಂಬ ಸ್ಥಳಗಥೆಯಿದೆ. ಅಲ್ಲದೆ ಇಲ್ಲಿಯೇ ಹಿಂದೆ ಭೃಗು ಮಹರ್ಷಿಗಳು ತಪಸ್ಸು ಮಾಡಿದ್ದರು ಎಂದು ಹೇಳಲಾಗುವ ಗುಹೆಯೂ ಇದೆ.ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳ ಜಾತ್ರೆ ಸಹ ನಡೆಯುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ರಾಸುಗಳ ಖರೀದಿಗೆ ವ್ಯಾಪಾರಿಗಳು ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಸಂಪ್ರದಾಯವೂ ಇದೆ. ಈಚೆಗೆ ಉಚಿತ ಸಾಮೂಹಿಕ ವಿವಾಹಗಳನ್ನೂ ನಡೆಸಲಾಗುತ್ತಿದೆ.ಹೇಮಾವತಿ ನದಿಯ ಪ್ರಶಾಂತ ವಾತಾವರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೇಕ ಅಪರೂಪದ ಪಕ್ಷಿಗಳು ನೆಲೆ ಮಾಡಿಕೊಂಡಿವೆ. ಪ್ರಮುಖವಾಗಿ ಪೆಲಿಕಾನ್, ನೈಟ್‌ಹೆರಾನ್, ನೀರುಕಾಗೆ ಮತ್ತಿತರ ಪಕ್ಷಿಗಳು ನದಿಯ ಮಧ್ಯಭಾಗದಲ್ಲಿರುವ ನಡುಗಡ್ಡೆಗಳ ಮರಗಳ ಮೇಲೆ ಗೂಡುಕಟ್ಟಿಕೊಂಡು ತಮ್ಮ ಸಂತಾನಾಭಿವೃದ್ದಿಗೆ ಆಗಮಿಸುತ್ತವೆ. ಅವುಗಳನ್ನೂ ವೀಕ್ಷಿಸಬಹುದು.

ಈ ಭಾಗದ ಶಕ್ತಿ ದೇವತೆ ಚಂದುಗೋನಹಳ್ಳಿ ಅಮ್ಮನ ದೇವಾಲಯವಿದೆ. ಆದಿಚುಂಚನಗಿರಿ ಮಠದ ಶಾಖಾಮಠವೂ ಸಹ ಇಲ್ಲಿದೆ. ಸಮೀಪದಲ್ಲಿಯೇ ತ್ರಿಶೂಲ್ ಪವರ್ ಕಾರ್ಪೊರೇಷನ್‌ನ  ಕಿರು ವಿದ್ಯುತ್ ಉತ್ಪಾದನಾ ಘಟಕವು ಸಹ ಇದೆ.ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಈ ಸುಂದರ ತಾಣದಲ್ಲಿ ಯಾತ್ರಿಗಳ ತಂಗುವಿಕೆಗೆ ಸೂಕ್ತ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry