ಶುಕ್ರವಾರ, ಏಪ್ರಿಲ್ 23, 2021
22 °C

ವೆಚ್ಚ ಸಲ್ಲಿಸದ 183 ಮಂದಿ ಅನರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ 2010ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವೆಚ್ಚ ವಿವರ ಸಲ್ಲಿಸದ 183 ಅಭ್ಯರ್ಥಿಗಳನ್ನು ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಗುಲ್ಬರ್ಗ ಜಿಪಂಗೆ ಸ್ಪರ್ಧಿಸಿದವರಲ್ಲಿ 39 ಮಂದಿ ಅನರ್ಹಗೊಂಡಿದ್ದು, ತಾಪಂ ಪೈಕಿ ಗುಲ್ಬರ್ಗ-43, ಆಳಂದ-40, ಅಫಜಲಪುರ -7, ಸೇಡಂ -7, ಚಿಂಚೋಳಿ-32 ಹಾಗೂ ಜೇವರ್ಗಿ-15 ಮಂದಿ ಅರ್ಹತೆ ಕಳೆದುಕೊಂಡಿದ್ದಾರೆ. ಜಿಪಂ ವಿವರ ಹೀಗಿವೆ:
  ಕಮಲಾಪುರದ ಧರ್ಮವೀರ ತುಕಾರಾಮ ಪೋಲಾ, ಅಬ್ದುಲ್ ಲತೀಫ್ ಅಬ್ದುಲ್ ಗಫುರ, ಶ್ರೀನಿವಾಸ ಸುಭಾಶ್ಚಂದ್ರ ಕಂಬಾರ, ಮಹಾಗಾಂವದ ಶಂಭುಲಿಂಗಯ್ಯ ಗುರುಲಿಂಗಯ್ಯೊ, ಕುಸನೂರದ ಮಾಲನಬಿ ಅಬ್ದುಲ್ ಮಿಯ್ಯೊ, ಖಣದಾಳದ ವಿಜಯುಲಕ್ಷ್ಮಿ ಹಣಮಂತ ವಾಡೇಕರ್, ಕವಿತಾ ವಿಠ್ಠಲ ಜಾಧವ, ಫರಹತಾಬಾದ್‌ನ ಜಯಶ್ರೀ ಶಿವಕುಮಾರ ಪಡಶೆಟ್ಟಿ,  ಭೀಮಬಾಯಿ ಚಂದ್ರಶಾ ಕಲ್ಲೆೀಶಿ, ಶರಣಮ್ಮ ಅಮತ ತೇಲಿ, ಶೋಭಾ ಸಿದ್ರಾಮಪ್ಪ, ಜಿಡಗಾದ ಚಂದಮ್ಮ ಶಿವಲಿಂಗಪ್ಪಾ, ಖಜೂರಿಯ ಸುನಿತಾ ಯಲ್ಲಪ್ಪ,ಮಾದನಹಿಪ್ಪರಗಾದ ಸವಿತಾ ಮಲ್ಲಿನಾಥ ಪರೇಣಿ, ನಿಂಬರ್ಗಾದ ಬಸವರಾಜ ವಿಠಲ ತೊಳೆ, ಚಿಂಚನಸೂರದ ವನಿತಾ ನಾಮದೇವ, ಚಂದ್ರಭಾಗ ದೌಲಪ್ಪ, ಕರಜಗಿಯ ಸಿದ್ದಪ್ಪ ಕರೇಪ್ಪ ಪೂಜಾರಿ, ಬಡದಾಳದ ಶರಣಪ್ಪಾ ಮದರಪ್ಪಾ ಸಿಂಗೆ, ಗೊಬ್ಬೂರ(ಬಿ)ಯ ಶ್ರೀದೇವಿ ಮಡಿವಾಳಪ್ಪ ಪಾಟೀಲ್, ಮಾಶಾಳದ ಕಲ್ಯಾಣಿ ಚಂದ್ರಕಾಂತ, ನೇಲೋಗಿಯ ಕಲ್ಲಾಲಿಂಗ ಈಶ್ವರಪ್ಪ, ಯಡ್ರಾಮಿಯ ಇಂದ್ರಾಬಾಯಿ ಶರಣಪ್ಪ, ಇಜೇರಿಯ ಅನ್ನಪೂರ್ಣ ಮಲ್ಲಯ್ಯೊ, ಕೋಳಕೂರದ ಮಹಾದೇವಿ ಹರಿಶ್ಚಂದ್ರ, ಅರಳಗುಂಡಗಿಯ ಬಸಮ್ಮ  ಮಹಾಂತಗೌಡ, ಕುಂಚಾವರಂನ ರಘುವೀರ, ಹಣಮಂತ, ಐನೋಳಿಯ ಭೀಮಶೆಟ್ಟಿ, ಚಂದ್ರಶೇಖರ,ಸುಲೇಪೇಟೆಯ ಹಣಮಂತರಾವ, ನಿಡಗುಂದದ ಕಾಶಮ್ಮ, ಕಾಳಗಿಯ ವಿನೋದಕುಮಾರ ನಾರಾಯಣ, ಟೆಂಗಳಿಯ ಡಿ.ಎಸ್. ನಾಮದಾರ, ವಿಜಯಕುಮಾರ ಶ್ರೀಮಂತ ಕಂಠಿ, ದಿಗ್ಗಾಂವದ ಸುವರ್ಣಾ ಮಹಾಲಿಂಗಪ್ಪ, ಕಸ್ತೂರಿಬಾಯಿ ಶರಣಬಸಪ್ಪ, ನಾಲವಾರದ ಉಬೇದ ಅನಸಾರಿ ಅಜಂ ಅನಸಾರಿ, ಅರಣಕಲ್‌ನ ಸಂಪಾವತಿ ಮಲ್ಲಿಕಾರ್ಜುನ ಅನರ್ಹಗೊಂಡವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.