ಸೋಮವಾರ, ಜೂನ್ 14, 2021
26 °C

ವೆಬ್‌ಸೈಟ್‌ಗೆ ಮೋದಿ ಅಭಿಮಾನಿ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ  ಅವರ ಅಭಿಮಾನಿ­ಯೊಬ್ಬ ಗುಜರಾತ್‌ನ ಐಟಿ ಉದ್ಯಮದ ಸಮಗ್ರ ಮಾಹಿತಿ ಗಳನ್ನು ಒಳಗೊಂಡ  ವೆಬ್‌ಸೈಟ್‌ಗೆ  ಕನ್ನ­ಹಾಕಿದ್ದಾನೆ.‘ಸ್ಪೈಡರ್‌’ ಹೆಸರಿನ ಈತ ಸರ್ಕಾರಿ  ಪ್ರಾಯೋಜಿತ ವೆಬ್‌ಸೈಟ್‌ಗೆ ಕನ್ನ ಹಾಕಿ ಮೋದಿ ಚಿತ್ರವನ್ನು  ಹೋಮ್‌­ಪೇಜ್‌­ನಲ್ಲಿ ಅಪ್‌ಲೋಡ್‌ ಮಾಡಿ­ದ್ದಾನೆ. ಪೋಟೋದೊಂದಿಗೆ ‘ಮೋದಿ ಮುಂದಿನ ಪ್ರಧಾನಿ’ ಎಂಬ ಸಂದೇಶ­ವನ್ನೂ ಹಾಕಿದ್ದಾನೆ.ಗುಜರಾತ್‌ ಸರ್ಕಾರದ ಕಂಪೆನಿ ‘ಗುಜರಾತ್‌ ಇನ್‌ಫರ್‌ಮ್ಯಾಟಿಕ್ಸ್‌ ಲಿಮಿಟೆಡ್‌’ (GIL),  ಹಾಗೂ ಖಾಸಗಿ ಕಂಪೆನಿ ‘ಎಲೆಕ್ಟ್ರಾನಿಕ್ಸ್‌ ಎಂಡ್‌ ಸಾಫ್ಟ್‌­ವೇರ್‌ ಇಂಡಸ್ಟ್ರೀಸ್‌ ಅಸೋಸಿಯೇಷನ್‌’ (GESIA) ಜಂಟಿಯಾಗಿ ಈ ವೆಬ್‌­ಸೈಟ್‌ನ್ನು ಪ್ರಾರಂಭಿಸಿವೆ. ಈ ವೆಬ್‌ಸೈಟ್‌ನ್ನು ಕಂಪೆನಿಗಳು ತಮ್ಮ ಗ್ರಾಹಕರನ್ನು ಸುಲಭವಾಗಿ ಸಂಪ­ರ್ಕಿ­­ಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಾರಂಭಿಸಿರು­ವುದಾಗಿ

ಸರ್ಕಾ­ರದ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.