ಗುರುವಾರ , ಜೂನ್ 17, 2021
21 °C
ತಡರಾತ್ರಿವರೆಗೂ ಬಿಎಂಟಿಸಿ ಬಸ್‌

ವೆಬ್‌ಸೈಟ್‌ನಲ್ಲಿ ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಸಂಚಾರವನ್ನು ಈಗ ರಾತ್ರಿ 11 ಗಂಟೆ ವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ತಡ­ರಾತ್ರಿ ವರೆಗೂ ಬೆಂಗಳೂರು ಮಹಾ­ನಗರ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ­ವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಬಲ ಬಂದಿದೆ.ರಾತ್ರಿ 10 ಗಂಟೆಯ ಬಳಿಕ ಬಿಎಂಟಿಸಿ ಬಸ್‌ಗಳ ಸಂಚಾರ ವಿರಳ. ಈ ಅವಧಿ­ಯಲ್ಲಿ ಕೆಲವೇ ಪ್ರಮುಖ ಮಾರ್ಗಗಳಲ್ಲಿ ಸಂಚಾರ ನಡೆಸುವ ಬಸ್‌ಗಳ ಸಂಖ್ಯೆ 70 ದಾಟು­­ವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ change.org ವೆಬ್‌­ಸೈಟ್‌­ನಲ್ಲಿ ತಡರಾತ್ರಿ ವರೆಗೂ ಬಸ್‌ ಸೇವೆ ವಿಸ್ತರಿಸಬೇಕು ಎಂಬ ಅಭಿಯಾನ­ದ ಮೂಲಕ ಹಕ್ಕೊತ್ತಾಯ ಮಂಡಿಸ­ಲಾಗಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ರಾತ್ರಿ 1 ಗಂಟೆವರೆಗೂ ಹೋಟೆಲ್‌, ಬಾರ್‌­ಗಳನ್ನು (ವಾರದಲ್ಲಿ 2 ದಿನ) ತೆರೆ­ಯಲು ಅನುಮತಿ ನೀಡಿತ್ತು. ಬಿಎಂ­ಟಿಸಿ ಬಸ್‌ ಸಂಚಾರ ಅವಧಿ­ಯನ್ನು ವಿಸ್ತ­ರಿಸ­ಬೇಕು ಎಂದು ಪ್ರಯಾಣಿಕರು ಆಗ್ರ­­­ಹಿಸಿ­ದ್ದರು. ಈ ಅಭಿಯಾನಕ್ಕೆ 11,000­ಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿ­ದ್ದಾರೆ.‘ತಡ ರಾತ್ರಿವರೆಗೂ ಬಿಎಂಟಿಸಿ ಬಸ್‌­ಗಳನ್ನು ಓಡಿಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅಂತಹ ಬೇಡಿ­ಕೆಯೇ ಇಲ್ಲ. ತಡರಾತ್ರಿ ವರೆಗೆ ಹೋಟೆಲ್‌­ಗಳ ವಹಿ­ವಾಟು ವಿಸ್ತರಣೆ­ಯಿಂದ ಆಗಿರುವ ಅನು­ಕೂಲಗಳ ಬಗ್ಗೆ ವಿವರ ಇನ್ನಷ್ಟೇ ದೊರ­ಕ­ಬೇಕಿದೆ. ಬಳಿಕ ಈ ಬಗ್ಗೆ ಅಧ್ಯಯನ ನಡೆಸಿ ತಡ­ರಾತ್ರಿವರೆಗೆ ಬಸ್‌ ಸಂಚಾರಕ್ಕೆ ಅನುವು ಮಾಡುವ ಬಗ್ಗೆ ತೀರ್ಮಾನ ಕೈಗೊ­­ಳ್ಳ­ಲಾಗುವುದು’ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿ­ಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.