ಸೋಮವಾರ, ಜೂನ್ 14, 2021
24 °C

ವೆಸ್ಟಾಸ್ ವಿಂಡ್ ಟೆಕ್ನಾಲಜಿ ಕಂಪೆನಿ ವಿರುದ್ಧ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ವೆಸ್ಟಾಸ್ ವಿಂಡ್ ಟೆಕ್ನಾಲಜಿ ಕಂಪೆನಿಯಲ್ಲಿ ಒಪ್ಪಂದದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಟಾರ್ಗೆಟ್ ಸೆಕ್ಯೂರಿಟಿ ಸರ್ವೀಸಸ್ ಸಂಸ್ಥೆಯ ಉದ್ಯೋಗಿಗಳ ಮೇಲೆ ವಿನಾಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿ ಸೆಕ್ಯೂರಿಟಿ ಗಾರ್ಡ್‌ಗಳು ಕಂಪೆನಿಯ ಹಾರಕನಾಳು ಸಬ್‌ಸ್ಟೇಷನ್ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಅಖಿಲ ಭಾರತ ಕೃಷಿ ಕೂಲಿಕಾರ್ಮಿಕರ ಸಂಘಟನೆಯ (ಎಐಎಡಬ್ಲ್ಯೂಯು) ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಬಿ. ಹಾಲೇಶನಾಯ್ಕ ಮಾತನಾಡಿ, ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೆ ಕಂಪೆನಿಯ ಅಧಿಕಾರಿಗಳು ವಿನಾಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವ ಮೂಲಕ ಅವರ ಹಕ್ಕುಗಳನ್ನು ಹರಣ ಮಾಡುತ್ತಿದ್ದಾರೆ.

 

ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ರೂ7,500ವೇತನ ಸೇರಿದಂತೆ ಇನ್ನಿತರೆ ಸೌಲಭ್ಯ ನೀಡಬೇಕೆಂಬ ಸ್ಪಷ್ಟ ನಿರ್ದೇಶನ ಇದ್ದಾಗಲೂ, ಕಾರ್ಮಿಕರ ಕಾಯ್ದೆಯನ್ನು ಉಲ್ಲಂಘಿಸುವ ಮೂಲಕ, ದೌರ್ಜನ್ಯ ಎಸಗಲಾಗುತ್ತಿದೆ. ಅನ್ಯಾಯಕ್ಕೆ ಒಳಗಾದ ಕಾರ್ಮಿಕ ಈ ಬಗ್ಗೆ ಪ್ರಶ್ನಿಸಿದರೆ, ಮಾರನೇ ದಿನವೇ ಅವನನ್ನು ಕರ್ತವ್ಯದಿಂದ ಕಿತ್ತುಹಾಕುವ ಪ್ರವೃತ್ತಿಯನ್ನು ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಉದ್ಯೋಗಿಗಳಿಗೆ ಕನಿಷ್ಠ ರೂ7,500 ವೇತನ ಪಾವತಿ ಮಾಡಬೇಕು. ಗುಡ್ಡದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಾಹನ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯಲ್ಲಿ ಕಂಪೆನಿಯ ಅಧಿಕಾರಿಗಳಿಗೆ ಸಲ್ಲಿಸಿದರು.ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಮುಖಂಡ ವೆಂಕಟೇಶ್ ಬೇವಿನಹಳ್ಳಿ, ಎಸ್‌ಎಫ್‌ಐ ಮುಖಂಡ ಸತೀಶ್, ಉದ್ಯೋಗಿಗಳಾದ ಎಚ್. ಪರಮೇಶ್, ಎಸ್.ಸಿ. ಫಕೀರನಾಯ್ಕ, ಎಲ್. ಸಾಣ್ಯನಾಯ್ಕ, ಎಲ್. ಮಂಜ್ಯಾನಾಯ್ಕ, ಎಲ್. ಖೇಮಾನಾಯ್ಕ, ಪಿ. ರಾಮನಾಯ್ಕ. ಎಂ. ಕೊಟ್ರಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.