ಸೋಮವಾರ, ಜೂನ್ 21, 2021
23 °C
ಕ್ರಿಕೆಟ್‌: ಮೈಕಲ್‌ ಲಂಬ್‌ ಶತಕ ವ್ಯರ್ಥ; ಇಂಗ್ಲೆಂಡ್‌ಗೆ ನಿರಾಸೆ

ವೆಸ್ಟ್‌ ಇಂಡೀಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ್ಯಂಟಿಗ (ಎಎಫ್‌ಪಿ): ಡ್ವೇನ್‌ ಬ್ರಾವೊ (ಅಜೇಯ 87) ಹಾಗೂ ಲೆಂಡ್ಲ್‌ ಸಿಮೊನ್ಸ್‌ (65) ಅವರ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡ್‌ ವಿರುದ್ಧ ಇಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 15ರನ್‌ ಗೆಲುವು ಪಡೆದಿದೆ.ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತ ವಿಂಡೀಸ್‌  ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆಯಿತು. ಈ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 269ರನ್‌ ಪೇರಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ ಗೆ 254ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.ಕೆರೀಬಿಯನ್‌ ಪಡೆಯ ಆರಂಭ ಉತ್ತಮವಾಗಿರಲಿಲ್ಲ. ಈ ತಂಡ 45ರನ್‌ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಆಗ ಜೊತೆಯಾದ ಡ್ವೇನ್‌ ಬ್ರಾವೊ ಹಾಗೂ ಸಿಮೊನ್ಸ್‌ 5ನೇ ವಿಕೆಟ್‌ಗೆ 108ರನ್‌ ಕಲೆಹಾಕಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.91 ಎಸೆತ ಎದುರಿಸಿದ ಬ್ರಾವೊ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರೆ, ಸಿಮೊನ್ಸ್ 94ಎಸೆತ ಎದುರಿಸಿ 6ಬೌಂಡರಿ ಬಾರಿಸಿದರು. ಅಂತಿಮ ಕ್ಷಣಗಳಲ್ಲಿ ಡರೆನ್‌ ಸಮಿ (61; 36ಎ, 5ಬೌಂ, 4ಸಿ) ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ಮೊತ್ತ ಹೆಚ್ಚಿಸಿದರು.ಸವಾಲಿನ ಮೊತ್ತ ಬೆನ್ನಟ್ಟಿದ ಆಂಗ್ಲರ ಪಡೆಗೆ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಮೈಕಲ್‌ ಲಂಬ್‌ (106; 117ಎ, 7ಬೌಂ, 2ಸಿ) ಹಾಗೂ ಮೊಯೀನ್‌ ಅಲಿ (44; 59ಎ, 3ಬೌಂ) ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ನಂತರ ಬಂದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರಿಂದ ಈ ತಂಡ ಸೋಲು ಕಂಡಿತು.ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 269 (ಡ್ವೇನ್‌ ಬ್ರಾವೊ, ಅಜೇಯ 87, ಲೆಂಡ್ಲ್‌ ಸಿಮೊನ್ಸ್ 65, ಡರೆನ್‌ ಸಮಿ 61; ಟಿಮ್‌್ ಬ್ರೆಸ್ನನ್‌ 68ಕ್ಕೆ3, ಜೇಮ್ಸ್‌ ಟ್ರೆಡ್‌ವೆಲ್‌ 23ಕ್ಕೆ1): ಇಂಗ್ಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 254 (ಮೈಕಲ್‌ ಲಂಬ್‌ 106, ಮೊಯೀನ್‌ ಅಲಿ 44; ಸುನಿಲ್‌ ನಾರಾಯಣ 36ಕ್ಕೆ2, ಡ್ವೇನ್‌ ಸ್ಮಿತ್‌ 30ಕ್ಕೆ1)

ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 15ರನ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯ ಶ್ರೇಷ್ಠ: ಡ್ವೇನ್‌ ಬ್ರಾವೊ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.