ಮಂಗಳವಾರ, ಏಪ್ರಿಲ್ 13, 2021
32 °C

ವೆಸ್ಟ್ ಇಂಡೀಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಎಎಫ್‌ಪಿ): ಟಿನೊ ಬೆಸ್ಟ್ (24ಕ್ಕೆ 5) ಅವರ ಸಮರ್ಥ ಬೌಲಿಂಗ್ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶನಿವಾರ ಇಲ್ಲಿ ಕೊನೆಗೊಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 77 ರನ್‌ಗಳ ಜಯ ಪಡೆಯಿತು.ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಅಂತಿಮ ದಿನ ಗೆಲುವಿಗೆ 245 ರನ್‌ಗಳ ಗುರಿ ಪಡೆದ ಬಾಂಗ್ಲಾದೇಶ 54.3 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ವಿಂಡೀಸ್ ಎರಡು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆಯಿತು.6 ವಿಕೆಟ್‌ಗೆ 244 ರನ್‌ಗಳಿಂದ ಶನಿವಾರ ಆಟ ಆರಂಭಿಸಿದ್ದ ವಿಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 273 ರನ್‌ಗಳಿಗೆ ಆಲೌಟಾಯಿತು. ಬಾಂಗ್ಲಾ ಪರ ಸೊಹಗ್ ಗಾಜಿ (74ಕ್ಕೆ 6) ಯಶಸ್ವಿ ಬೌಲರ್ ಎನಿಸಿಕೊಂಡರು.ಗೆಲುವಿನ ಗುರಿ 250 ರನ್‌ಗಳಿಗೂ ಕಡಿಮೆಯಿದ್ದ ಕಾರಣ ಬಾಂಗ್ಲಾ ಆತ್ಮವಿಶ್ವಾಸದೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿತು.ಆದರೆ ತಮೀಮ್ ಇಕ್ಬಾಲ್ (5) ಬೇಗನೇ ಔಟಾದ್ದರಿಂದ ತಂಡ ಆರಂಭದಲ್ಲೇ ಒತ್ತಡಕ್ಕೆ ಒಳಗಾಯಿತು. ರವಿ ರಾಂಪಾಲ್ ಎಸೆತದಲ್ಲಿ ದಿನೇಶ್ ರಾಮ್ದಿನ್‌ಗೆ ಕ್ಯಾಚಿತ್ತು ತಮೀಮ್ ನಿರ್ಗಮಿಸಿದರು. ಆ ಬಳಿಕ ಟಿನೊ ಬೆಸ್ಟ್ ಎದುರಾಳಿ ತಂಡದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು.85 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡ ತಂಡ ಬಳಿಕ ಗೆಲುವಿನ ಆಸೆ ಕೈಬಿಟ್ಟು ಡ್ರಾ ಸಾಧಿಸಲು ಪ್ರಯತ್ನಿಸಿತು. ಆದರೆ ಬೆಸ್ಟ್ ಮತ್ತು ವೀರಸ್ವಾಮಿ ಪೆರುಮಾಳ್ (32ಕ್ಕೆ 3) ಅದಕ್ಕೆ ಅವಕಾಶ ನೀಡಲಿಲ್ಲ.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 144 ಓವರ್‌ಗಳಲ್ಲಿ 4 ವಿಕೆಟ್‌ಗೆ 527 ಡಿಕ್ಲೇರ್ಡ್‌ ಮತ್ತು ಎರಡನೇ ಇನಿಂಗ್ಸ್ 74.2 ಓವರ್‌ಗಳಲ್ಲಿ 273  (ಡರೆನ್ ಸಮಿ 16, ಸುನಿಲ್ ನಾರಾಯಣ್ ಔಟಾಗದೆ 22, ಸೊಹಗ್ ಗಾಜಿ 74ಕ್ಕೆ 6) ಬಾಂಗ್ಲಾದೇಶ: ಮೊದಲ ಇನಿಂಗ್ಸ್ 148.3 ಓವರ್‌ಗಳಲ್ಲಿ 556 ಮತ್ತು ಎರಡನೇ ಇನಿಂಗ್ಸ್ 54.3 ಓವರ್‌ಗಳಲ್ಲಿ 167 (ನಯೀಮ್ ಇಸ್ಲಾಮ್ 26, ಮಹಮೂದುಲ್ಲಾ 29, ಟಿನೊ ಬೆಸ್ಟ್ 24ಕ್ಕೆ 5, ವೀರಸ್ವಾಮಿ ಪೆರುಮಾಳ್ 32ಕ್ಕೆ 3). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 77 ರನ್ ಜಯ; ಪಂದ್ಯಶ್ರೇಷ್ಠ: ಕೀರನ್ ಪೊವೆಲ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.