ವೆಸ್ಟ್ ಇಂಡೀಸ್ ಎದುರು ಲಂಕಾಕ್ಕೆ ಜಯ

ಬುಧವಾರ, ಜೂಲೈ 24, 2019
28 °C

ವೆಸ್ಟ್ ಇಂಡೀಸ್ ಎದುರು ಲಂಕಾಕ್ಕೆ ಜಯ

Published:
Updated:

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ನಾಯಕ ಏಂಜೆಲೊ ಮ್ಯಾಥ್ಯೂಸ್ (29ಕ್ಕೆ4) ಹಾಗೂ ಶಮಿಂಡಾ ಎರಂಗಾ (46ಕ್ಕೆ3) ಅವರ ಪ್ರಭಾವಿ ಬೌಲಿಂಗ್ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡದವರು ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಎದುರು 39 ರನ್‌ಗಳ ಗೆಲುವು ಸಾಧಿಸಿದರು.ಈ ಪರಿಣಾಮ ಸಿಂಹಳೀಯ ಪಡೆಯ ಫೈನಲ್ ಪ್ರವೇಶದ ಕನಸು ಜೀವಂತವಾಗಿದೆ. ಈ ಸರಣಿಯಲ್ಲಿ ಪಾಲ್ಗೊಂಡಿರುವ ಆತಿಥೇಯ ವಿಂಡೀಸ್ ಹಾಗೂ ಭಾರತ ತಂಡದವರು ಕೂಡ ಫೈನಲ್‌ಗೆ ಸ್ಥಾನ ಪಡೆಯಲು ಅವಕಾಶ ಹೊಂದಿದ್ದಾರೆ. ಆದರೆ ಮಂಗಳವಾರ ನಡೆಯಲಿರುವ ಭಾರತ ಹಾಗೂ ಲಂಕಾ ನಡುವಿನ ಕೊನೆಯ ಲೀಗ್ ಪಂದ್ಯದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡಚಣೆ ಆಗಿತ್ತು. ಹಾಗಾಗಿ ಮೀಸಲು ದಿನವಾದ ಸೋಮವಾರವೂ ಮುಂದುವರಿಯಿತು. ಮೊದಲು ಬ್ಯಾಟ್ ಮಾಡಿದ್ದ ಲಂಕಾ 41 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಈ ಪಂದ್ಯದಲ್ಲಿ ಗೆಲುವು ಪಡೆಯಲು ವಿಂಡೀಸ್ 41 ಓವರ್‌ಗಳಲ್ಲಿ 230 ರನ್ ಗಳಿಸಬೇಕಾಗಿತ್ತು.

ಆದರೆ ಕೆರಿಬಿಯನ್ ಬಳಗ 41 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 190. ಮ್ಯಾಥ್ಯೂಸ್ ಹಾಗೂ ಎರಂಗಾ ದಾಳಿಗೆ ಸಿಲುಕಿದ ಆತಿಥೇಯರು ಕೇವಲ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಂತದಲ್ಲಿ ಡರೆನ್ ಬ್ರಾವೊ (70) ಹಾಗೂ ಲೆಂಡ್ಲೆ ಸಿಮನ್ಸ್ (67) ಐದನೇ ವಿಕೆಟ್‌ಗೆ 123 ರನ್ ಸೇರಿಸಿದರು. ಇವರಿಬ್ಬರು ಔಟಾದ ಬಳಿಕ ವಿಂಡೀಸ್ ಮತ್ತೆ ಕುಸಿತದ ಹಾದಿ ಹಿಡಿಯಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry