ವೆುಕ್ಕೆಜೋಳ ಕಟಾವಿಗೆ ಯಂತ್ರ

7

ವೆುಕ್ಕೆಜೋಳ ಕಟಾವಿಗೆ ಯಂತ್ರ

Published:
Updated:

ಬೆಳೆಗಳ ಕಟಾವಿಗೆ ಕೂಲಿಯಾಳುಗಳು ಸಿಗುವುದೇ ಈಗ ವಿರಳ. ಅಪರೂಪಕ್ಕೆ ಸಿಕ್ಕರೂ ಅವರಿಗೆ ದುಪ್ಪಟ್ಟು ಕೂಲಿ ನೀಡುವ ಪರಿಸ್ಥಿತಿ.

ರೈತರ ಈ ಸಮಸ್ಯೆ ಮನಗಂಡಿರುವ `ಕಿಸಾನ್ ಕ್ರಾಫ್ಟ್' ಕಂಪೆನಿ ಮೆಕ್ಕೆ ಜೋಳ ಕಟಾವಿಗೆಂದೇ ಹೊಸ ಯಂತ್ರೋಪಕರಣ ಕಂಡುಹಿಡಿದಿದೆ. ಇದೀಗ ಈ ಯಂತ್ರ ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ.ಸುಮಾರು ಎರಡು ಗಂಟೆಯ ಅವಧಿಯಲ್ಲಿ ಒಂದು ಎಕರೆಯಷ್ಟು ಮೆಕ್ಕೆಜೋಳವನ್ನು ಕಟಾವು ಮಾಡುವ ಸಾಮರ್ಥ್ಯ ಇದಕ್ಕಿದೆ. 50 ರಿಂದ 70 ಎಚ್.ಪಿ ಹೊಂದಿರುವ ಯಾವುದೇ ಕಂಪೆನಿಯ ಟ್ರಾಕ್ಟರ್‌ಗಳಿಗೆ ಈ ಕಟಾವು ಯಂತ್ರದ ಜೋಡಣೆ ಮಾಡಿದರೆ ಸಾಕು. ಮುಂದಿನ ಕೆಲಸ ಈ ಯಂತ್ರವೇ ಮಾಡುತ್ತದೆ.ಬದಲಾದ ಕೃಷಿ  ಪರಿಸ್ಥಿತಿಯಲ್ಲಿ ಆಳುಗಳ ಅಭಾವ ಹೆಚ್ಚಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವ ಯಂತ್ರ ಇದಾಗಿದೆ ಎನ್ನುತ್ತಾರೆ ಕಂಪೆನಿಯ ಮಾಲೀಕರು. ಮೆಕ್ಕೆ ಜೋಳ ಬೆಳೆಯುವಂತಹ ಪ್ರಧಾನ ಜಿಲ್ಲೆಗಳಾದ ಹಾವೇರಿ, ಬೆಳಗಾವಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆಗಳನ್ನು ಈಗಾಗಲೇ ನೀಡಿ ರೈತರಿಗೆ ಮನವರಿಕೆಯನ್ನೂ ಮಾಡಲಾಗಿದೆ.`ನನ್ನ ಜಮೀನಿನ  ಬೆಳೆಯನ್ನು ಕಟಾವು ಮಾಡುವುದಲ್ಲದೇ ಇತರ ರೈತರಿಗೆ ಈ ಯಂತ್ರವನ್ನು ಬಾಡಿಗೆ ಆಧಾರದಲ್ಲಿ  ನೀಡಿ ಅದರಿಂದಲೂ ಉತ್ತಮ ಲಾಭ ಗಳಿಸಿದ್ದೇನೆ' ಎನ್ನುತ್ತಾರೆ ಕುಂದನಹಳ್ಳಿ ಗ್ರಾಮ, ಪಿರಿಯಾ ಪಟ್ಟಣ ತಾಲ್ಲೂಕಿನ ರೈತ ಶಿವರಾಜ. ಈ ಯಂತ್ರದಿಂದ ನನ್ನ ಬಹುತೇಕ ಸಮಸ್ಯೆಗಳು ಕಡಿಮೆಯಾಗಿವೆ ಎಂದು ಹೆಮ್ಮೆಯಿಂದ ಬೀಗುತ್ತಾರೆ ಶಿಕಾರಿಪುರ ತಾಲ್ಲೂಕಿನ ರೈತ ರಾಮಕೃಷ್ಣ. ಕಂಪನಿಯಲ್ಲಿ ಕೇವಲ ಈ ಯಂತ್ರವಷ್ಟೇ ಅಲ್ಲದೇ, ವಿವಿಧ ಬೆಳೆಗಳಿಗೆ ಅನುಗುಣವಾಗಿ ಹಲವು ಯಂತ್ರಗಳು ಲಭ್ಯ ಇವೆ ಎನ್ನುವ ಅಭಿಮತ ಕಂಪೆನಿಯದ್ದು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 88847 06849, (080) 22330318.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry