ವೇಗದಲ್ಲಿ ಕರಗುತ್ತಿರುವ ಅಂಟಾರ್ಕ್ಟಿಕಾ ಹಿಮಹಾಸು!

7

ವೇಗದಲ್ಲಿ ಕರಗುತ್ತಿರುವ ಅಂಟಾರ್ಕ್ಟಿಕಾ ಹಿಮಹಾಸು!

Published:
Updated:

ವಾಷಿಂಗ್ಟನ್ (ಪಿಟಿಐ): ಪ್ರತಿ ವರ್ಷ ಸಾಗರದ ನೀರಿನ ಮಟ್ಟ ಏರಲು ಕಾರಣವಾಗುತ್ತಿರುವ ಪಶ್ಚಿಮ ಅಂಟಾರ್ಕ್ಟಿಕಾದ ಹಿಮಹಾಸಿನ ಕರಗುವಿಕೆಯ ವೇಗವು ಈ ಹಿಂದೆ ಊಹಿಸಿದ್ದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.1958ರಿಂದ ಈಚೆಗಿನ ತಾಪಮಾನ ದಾಖಲಾತಿಗಳ ಅಧ್ಯಯನದ ನಂತರ, ಜಗತ್ತಿನ ಬೇರೆಡೆಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ತಾಪಮಾನವು ಮೂರು ಪಟ್ಟು ವೇಗದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಓಹಿಯೊ ಸ್ಟೇಟ್ ವಿಶ್ವವಿದ್ಯಾಲಯದ ಭೂಗೋಲ ಪ್ರೊಫೆಸರ್ ಡೇವಿಡ್ ಬ್ರೊಮ್‌ವಿಚ್ ವಿವರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry