ಮಂಗಳವಾರ, ಜನವರಿ 21, 2020
27 °C

ವೇಗಿಗಳ ಮೇಲೆ ಭರವಸೆ ಇದೆ: ಮನ್‌ದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವೇಗದ ಬೌಲರ್‌ಗಳೇ ನಮ್ಮ ತಂಡದ ಪ್ರಮುಖ ಅಸ್ತ್ರ. ರಾಜನಗರ ಮೈದಾನದ ಪಿಚ್‌ ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ಅವರ ಮೇಲೆ ಸಂಪೂರ್ಣ ಭರವಸೆ ಇರಿಸಿ ಮೈದಾನಕ್ಕೆ ಇಳಿಯಲಿದ್ದೇವೆ ಎಂದು ಪಂಜಾಬ್‌ ತಂಡದ ನಾಯಕ ಮನ್‌ದೀಪ್‌ ಸಿಂಗ್‌ ಹೇಳಿದರು.ಕರ್ನಾಟಕ ತಂಡ ಪ್ರತಿ ರಣಜಿ ಋತುವಿನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಅವರ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ ನಮ್ಮ ತಂಡವೂ ಬಲಿಷ್ಠವಾಗಿದ್ದು ಉತ್ತಮ ಸ್ಪರ್ಧೆ ನಿರೀಕ್ಷಿಸಲಾಗಿದೆ ಎಂದು ಅವರು ನುಡಿದರು.

ಪ್ರತಿಕ್ರಿಯಿಸಿ (+)