ಬುಧವಾರ, ಜೂನ್ 16, 2021
22 °C

ವೇಟ್‌ಲಿಫ್ಟಿಂಗ್‌: ಭಾರತಕ್ಕೆ ಐದು ಕಂಚಿನ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಸ್ಪರ್ಧಿಗಳು ಥಾಯ್ಲೆಂಡ್‌ನ ಬ್ಯಾಂಗ್‌ ಸಾಯಿನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಕಂಚಿನ ಪದಕ ಗೆದ್ದುಕೊಂಡರು. ಜೂನಿಯರ್‌ ಪುರುಷರ 77 ಕೆ.ಜಿ. ವಿಭಾಗದಲ್ಲಿ ಕೊಜುಮ್‌ ತಾಬಾ  ಎರಡು ಕಂಚಿನ ಪದಕ ಗೆದ್ದುಕೊಂಡರು.ಕ್ಲೀನ್‌ ಮತ್ತು ಜರ್ಕ್‌ (162 ಕೆ.ಜಿ) ಹಾಗೂ ಒಟ್ಟು (285 ಕೆ.ಜಿ) ವಿಭಾಗದಲ್ಲಿ ಅವರು ಈ ಸಾಧನೆ  ಮಾಡಿದರು. 

ಮಹಿಳೆಯರ 63 ಕೆ.ಜಿ. ವಿಭಾಗದಲ್ಲಿ ಪೂನಂ ಯಾದವ್‌ ಮೂರು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ನ್ಯಾಚ್‌ (87 ಕೆ.ಜಿ), ಕ್ಲೀನ್‌ ಮತ್ತು ಜರ್ಕ್‌ (114) ಹಾಗೂ ಒಟ್ಟಾರೆಯಾಗಿ (201 ಕೆ.ಜಿ) ಅವರು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಹರ್ಷದೀಪ್‌ ಕೌರ್‌ ಒಟ್ಟು 165 ಕೆ.ಜಿ. ಭಾರ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದರು.  ಭಾರತದ ಸಾಯಿಕೋಮ್‌ ಮೀರಾ ಭಾಯಿ ಚಾನು ಚಾಂಪಿಯನ್‌ ಷಿಪ್‌ನ ಮೊದಲ ದಿನ ಮೂರು ಬೆಳ್ಳಿ ಪದಕಗಳನ್ನು ಜಯಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.