ಮಂಗಳವಾರ, ನವೆಂಬರ್ 19, 2019
23 °C

ವೇಟ್‌ಲಿಫ್ಟಿಂಗ್: ಭಾರತಕ್ಕೆ 2 ಪದಕ

Published:
Updated:

ನವದೆಹಲಿ (ಪಿಟಿಐ): ಭಾರತದ  ಆರ್. ಆರ್ ವೆಂಕಟ್, ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಯುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು.ಬಾಲಕರ 77 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ವೆಂಕಟ್, `ಸ್ನ್ಯಾಚ್'ನಲ್ಲಿ 136 ಕೆ.ಜಿ ಭಾರ ಎತ್ತಿ ಬೆಳ್ಳಿ ಪದಕ ಮತ್ತು ಒಟ್ಟು 296 ಕೆ.ಜಿ (136+160) ಭಾರ ಎತ್ತಿ ಕಂಚಿನ ಪದಕ ಜಯಿಸಿದರು.ಈ ವಿಭಾಗದಲ್ಲಿ ರಷ್ಯಾದ ಖೇತಗ್ ಖುಗಯೇವ್ 312 ಕೆ.ಜಿ (144+168) ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. 297 ಕೆ.ಜಿ (136+161) ತೂಕ ಎತ್ತಿದ ಕಜಕಸ್ತಾನದ ಅಯಾತ್ ಅಮಿರ್‌ಬೆಕೋವ್ ಬೆಳ್ಳಿ ಗೆದ್ದುಕೊಂಡರು.ಚಾಂಪಿಯನ್‌ಷಿಪ್‌ನಲ್ಲಿ ಭಾರತ ಈವರೆಗೆ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದೆ.

ಪ್ರತಿಕ್ರಿಯಿಸಿ (+)