ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ ಸಂಪನ್ನ

7

ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ ಸಂಪನ್ನ

Published:
Updated:

ವೇಣೂರು(ದಕ್ಷಿಣ ಕನ್ನಡ ಜಿಲ್ಲೆ): `ಅಹಂಕಾರ ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತದೆ. ಅಹಂಕಾರ ನಿರ್ಮೂಲನೆ ಬಾಹುಬಲಿಯಿಂದ ಜಗತ್ತು ಕಲಿಯಬೇಕಾದ ಪಾಠ~ ಎಂದು ಸಾಹಿತಿ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ವೇಣೂರಿನಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ- 2012 ಅಂಗವಾಗಿ ಭಾನುವಾರ ನಡೆದ ಭಾವೈಕ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಬಾಹುಬಲಿ ಜೈನರಿಗೆ ಸೀಮಿತ ಅಲ್ಲ. ಅವರನ್ನು ದೇಶದ ಮಹಿಮೆ ಎಂದು ತಿಳಿದುಕೊಳ್ಳಬೇಕು. ಅವರು ಜಗತ್ತಿನಲ್ಲಿ ಶಾಂತಿಯ ಬದುಕಿಗೆ ಪುಷ್ಠಿ ನೀಡಿದವರು ಎಂದು ಅವರು ಬಣ್ಣಿಸಿದರು.ಇಡೀ ಜಗತ್ತಿಗೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆ ಬಾಹುಬಲಿ ಶಿಲ್ಪ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಬಾಹುಬಲಿಗೆ ಬಾಹುಬಲಿಯೇ ಸಾಟಿ. ಅವರಿಗೆ ಆಕಾಶವೇ ಚಾವಣಿ, ಬಯಲೇ ದೊಡ್ಡ ಬಸದಿ ಎಂದು ಅವರು ತಿಳಿಸಿದರು. 108 ಪಾವನ ಕೀರ್ತಿ ಸಾಗರ ಮುನಿ ಮಹಾರಾಜರು, ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಉಜ್ಜಯಿನಿಯ ರವೀಂದ್ರ ಕೀರ್ತಿ ಸ್ವಾಮೀಜಿ, ಜಯೇಂದ್ರ ಕೀರ್ತಿ ಸ್ವಾಮೀಜಿ, ಸೋಂದಾ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಅಳದಂಗಡಿ ಅರಮನೆಯ ಅರಸ ಡಾ. ಪದ್ಮಪ್ರಸಾದ್ ಅಜಿಲ, ಶಾಸಕ ಅಭಯಚಂದ್ರ ಜೈನ್, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ವಿ. ಧನಂಜಯ ಕುಮಾರ್, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಎಂ.ಎನ್. ರಾಜೇಂದ್ರ ಕುಮಾರ್ ಇದ್ದರು.ಮಹಾಮಸ್ತಕಾಭಿಷೇಕ ಸಂಪನ್ನ: ಮಹಾಮಸ್ತಕಾಭಿಷೇಕದ ಕೊನೆಯ ದಿನವಾದ ಭಾನುವಾರ 1008 ಕಲಶಗಳು ಮತ್ತು ಹಾಲು, ಗಂಧ, ಚಂದನ ಸಹಿತ ಇತರ ವಸ್ತುಗಳಿಂದ ಅಭಿಷೇಕ ನಡೆಯಿತು. ಶನಿವಾರ ಹಾಗೂ ಭಾನುವಾರ ವೇಣೂರಿಗೆ ಜನಸಾಗರ ಹರಿದು ಬಂದಿತ್ತು. ಭಾನುವಾರ ಐವತ್ತು  ಸಾವಿರಕ್ಕೂ ಅಧಿಕ ಭಕ್ತ ಮಹಾಸಾಗರ ಮಹಾಮಸ್ತಕಾಭಿಷೇಕದ ಸೊಬಗನ್ನು ಸವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry