ವೇತನಕ್ಕಾಗಿ ಕೂಲಿ ಕಾರ್ಮಿಕರ ಧರಣಿ

ಬಸವನಬಾಗೇವಾಡಿ: ನಾಲ್ಕು ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಬಸವನಬಾಗೇವಾಡಿ ಪುರಸಭೆಯ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.
ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಬಾಕಿ ಉಳಿಸಿಕೊಂಡಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸೇವೆಯನ್ನು ಕಾಯಂಗೊಳಿಸುವಂತೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಈ ಹಿಂದೆ ಗುತ್ತಿಗೆದಾರರಿಂದ ಪ್ರತಿ ತಿಂಗಳು ವೇತನ ಪಾವತಿ ಮಾಡಲಾಗತ್ತಿತ್ತು. ಈಗ ಗುತ್ತಿಗೆದಾರರು ಇಲ್ಲದ ಕಾರಣ ಜಿಲ್ಲಾಧಿಕಾರಿಗಳು ಪುರಸಭೆ ಮೂಲಕ ವೇತನ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ. ಏಪ್ರಿಲ್, ಮೇ ಹಾಗೂ ಜೂನ್ 18ರವರೆಗಿನ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.
ನಂತರು ಕೂಲಿ ಕಾರ್ಮಿಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಮಾರುತಿ ಮ್ಯೋಗೇರಿ, ಸಿದ್ಧರಾಮಪ್ಪ ಉಕ್ಕಲಿ, ಪ್ರಕಾಶ ಮ್ಯೋಗೇರಿ, ಸುಭಾಸ ಕಲ್ಯಾಣಿ, ರುದ್ರಪ್ಪ ಬಾಗೇವಾಡಿ, ಸಿದ್ರಾಮ ಕಲ್ಯಾಣಿ, ರಾವತಪ್ಪ ಮ್ಯೋಗೇರಿ, ಮಲ್ಲಪ್ಪ ಅಂಬಾಗೋಳ, ರಮೇಶ ಗರಸಂಗಿ, ಸಿಂಧೂರ ಮ್ಯೋಗೇರಿ, ಪೀರಪ್ಪ ಹಲಗಿ, ರಾಮಪ್ಪ ನರಸಲಗಿ, ಸಂಗಪ್ಪ ನಂದಿ, ರಮೇಶ ಕೊಂಡಗೂಳಿ, ಬೋರಮ್ಮ ಮ್ಯೋಗೇರಿ, ಹುಲಿಗೆವ್ವ ಜಾಯವಾಡಗಿ, ಮಹಾದೇವಿ ಮಾದರ, ದುರ್ಗವ್ವ ಹಾದಿಮನಿ, ರುಕ್ಕವ್ವ ನಂದಿ, ಯಲ್ಲವ್ವ ಮ್ಯೋಗೇರಿ, ಗಂಗವ್ವ ಅಂಬಾಗೋಳ, ನಿಂಬೆವ್ವ ಮಾದರ, ತಿಪ್ಪವ್ವ ಅಂಬಾಗೋಳ ಮೊದಲಾದವರು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.