ವೇತನ ತಾರತಮ್ಯ ನಿವಾರಣೆಗೆ ಸರ್ಕಾರಿ ನೌಕರರ ಆಗ್ರಹ

7

ವೇತನ ತಾರತಮ್ಯ ನಿವಾರಣೆಗೆ ಸರ್ಕಾರಿ ನೌಕರರ ಆಗ್ರಹ

Published:
Updated:

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ನಿವಾರಿಸಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.13 ಲಕ್ಷಕ್ಕೂ ಅಧಿಕ ಹುದ್ದೆ ಭರ್ತಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಗರದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ನಿರ್ಣಯ ಕೈಗೊಂಡಿದೆ.ರಾಜ್ಯ ಸರ್ಕಾರ ನೇಮಿಸಿದ್ದ 6ನೇ ವೇತನ ಸಮಿತಿ, ಅಂತಿಮ ವರದಿಯಲ್ಲಿ 2012ರ ಜನವರಿಯಲ್ಲಿ ಕೊಡಬೇಕಿದ್ದ ಬಾಕಿ ಡಿಎ ಸೇರಿಸಿ ಶೇ 22.5ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಿತು. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿನ ಶೇ 10ರಷ್ಟು ವ್ಯತ್ಯಾಸ ಮುಂದುವರಿದಿದೆ ಎಂದು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ. ಶಿವಶಂಕರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry