ವೇತನ ಪರಿಷ್ಕರಣೆಗೆ ಒತ್ತಾಯ

7

ವೇತನ ಪರಿಷ್ಕರಣೆಗೆ ಒತ್ತಾಯ

Published:
Updated:

ರಾಣೆಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಯ ಗ್ರಾಮ ಸಹಾ­ಯಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗ್ರಾಮ ಸಹಾಯಕರ ಹುದ್ದೆಯನ್ನು ‘ಡಿ‘ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಪರಿಷ್ಕರಣೆ ಮಾಡ­ಬೇಕು ಎಂದು ಒತ್ತಾಯಿಸಿ ಸೋಮ­ವಾರ ಪ್ರತಿಭಟನೆ ನಡೆಸಿ ಉಪತ­ಹಶೀ­ಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ₨ 9,600 ರಿಂದ ₨14,550 ವೇತನ ನಿಗದಿಪ­ಡಿಸ­ಬೇಕು. ನಿವೃತ್ತಿ ಹೊಂದಿದವರಿಗೆ ರೂ 1ಲಕ್ಷ  ವರೆಗೆ ಪರಿಹಾರ ಧನ ನೀಡ­ಬೇಕು. ಅಲ್ಲದೆ ಪ್ರತಿ ತಿಂಗಳು ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಗ್ರಾಮ ಸಹಾಯಕ ನಿಂಗಪ್ಪ ಅಂಕಸಾಪುರ ಮಾತನಾಡಿದರು. ಶಫೀ ಪಠಾಣ, ಹನುಮಂತಪ್ಪ  ಓಲೇಕಾರ, ಗಜೇಂದ್ರ ದೊಡ್ಡಮನಿ, ನಿಂಗಪ್ಪ ಸೇರಿದಂತೆ ನೂರಾರು ಗ್ರಾಮ ಸಹಾಯಕರು ಉಪಸ್ಥಿರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry