ವೇತನ ಬಿಡುಗಡೆಗೆ ಆಗ್ರಹಿಸಿ ಮಹಿಳಾ ಕಾರ್ಮಿಕರ ಪ್ರತಿಭಟನೆ

7

ವೇತನ ಬಿಡುಗಡೆಗೆ ಆಗ್ರಹಿಸಿ ಮಹಿಳಾ ಕಾರ್ಮಿಕರ ಪ್ರತಿಭಟನೆ

Published:
Updated:

ಕೃಷ್ಣರಾಜಪುರ: ವೇತನ ಬಿಡುಗಡೆಗೆ ಒತ್ತಾಯಿಸಿ ಭಟ್ಟರಹಳ್ಳಿ ಸಮೀಪದ ಗಾರ್ಮೆಂಟ್ ಕಾರ್ಖಾನೆಯೊಂದರ ಮಹಿಳಾ ಕಾರ್ಮಿಕರು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ ಅವರ ನೇತೃತ್ವದಲ್ಲಿ ಇಲ್ಲಿನ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗೌರಮ್ಮ, `ಎರಡು ತಿಂಗಳಿನಿಂದ ಮಾಲೀಕರು ಸಂಬಳ ವಿತರಿಸದೇ ಇರುವುದರಿಂದ ಬದುಕು ಸಾಗಿಸಲು ಬಹಳ ಕಷ್ಟವಾಗಿದೆ.ಮಾಲೀಕರ ವಿರುದ್ಧ ದೂರು ನೀಡಿದ್ದು, ಪೊಲೀಸರು ಅವರನ್ನು ಬಂಧಿಸಿದ್ದರು. ಆದರೆ ಮಾಲೀಕರು ಚೆಕ್ ನೀಡಿದರೆಂದು ಪೊಲೀಸರು ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಸಿದರು.`ಮಾಲೀಕರು ತಮ್ಮ ತಮ್ಮನ ಹೆಸರಿನಲ್ಲಿ ಚೆಕ್ ಬರೆದು ನೀಡಿದ್ದಾರೆ. ಇದರಿಂದಾಗಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗಿಲ್ಲ~ ಎಂದು ಇದೇ ಸಂದರ್ಭದಲ್ಲಿ ದೂರಿದರು.`ದುಡಿಮೆಯ ಹಣವನ್ನು ನಂಬಿಕೊಂಡು ನಾವು ಸಂಸಾರ ನಡೆಸಬೇಕಾಗಿದೆ. ಮಕ್ಕಳ ಭವಿಷ್ಯವೂ ಹಣದ ಮೇಲೆ ನಿಂತಿದೆ. ಹಾಗಾಗಿ ನಿತ್ಯದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ~ ಎಂದು ಮಹಿಳಾ ಕಾರ್ಮಿಕರು ಅಳಲು ತೋಡಿಕೊಂಡರು. ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry