ವೇತನ ಹೆಚ್ಚಳ: ಭಾರತೀಯ ಕಂಪೆನಿಗಳು ಮುಂದೆ

7

ವೇತನ ಹೆಚ್ಚಳ: ಭಾರತೀಯ ಕಂಪೆನಿಗಳು ಮುಂದೆ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ, ಹಣಕಾಸು ಮಾರುಕಟ್ಟೆ­ಯಲ್ಲಿನ ತಲ್ಲಣ ಇತ್ಯಾದಿ ಪ್ರತಿಕೂಲ ಸಂಗತಿಗಳ ನಡುವೆಯೂ ಭಾರತೀಯ ಕಂಪೆನಿಗಳು ಪ್ರಸಕ್ತ ಸಾಲಿನಲ್ಲಿ ಉದ್ಯೋಗಿಗಳ ವಾರ್ಷಿಕ ವೇತನವನ್ನು  ಶೇ 9.8ರಷ್ಟು ಹೆಚ್ಚಿಸಿವೆ.ಈ ವರ್ಷ ಗರಿಷ್ಠ ಮಟ್ಟದಲ್ಲಿ  ವೇತನ ಪರಿಷ್ಕರಣೆ ಮಾಡಿರುವ ದೇಶಗಳ ಪಟ್ಟಿಯಲ್ಲೂ ಭಾರತ ಮುಂಚೂ­ಣಿ­ಯಲ್ಲಿದೆ ಎಂದು ಫೆಡರ್‌ಸನ್‌ ಅಂಡ್‌ ಪಾರ್ಟ್‌ನರ್‌ ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.  ವೇತನ ಏರಿಕೆಯಲ್ಲಿ ದಕ್ಷಿಣ ಆಫ್ರಿಕಾ ಎರಡನೆಯ ಸ್ಥಾನದಲ್ಲಿದ್ದು, ಸಿಬ್ಬಂದಿ ವೇತನ ಸರಾಸರಿ ಶೇ  8.8ರಷ್ಟು ಹೆಚ್ಚಿದೆ. ಚೀನಾದಲ್ಲಿ ಶೇ 6.8ರಷ್ಟು, ಬ್ರಿಟನ್‌­ನಲ್ಲಿ ಶೇ 4.4ರಷ್ಟು,  ಯೂರೋಪ್‌ ಒಕ್ಕೂಟದ ದೇಶಗಳಲ್ಲಿ ಶೇ 4.1ರಷ್ಟು ಅಮೆರಿಕ ಮತ್ತು ಜಪಾನ್‌ನಲ್ಲಿ ಶೇ 4ರಷ್ಟು ವಾರ್ಷಿಕ ವೇತನದಲ್ಲಿ ಹೆಚ್ಚಳ­ವಾಗಿದೆ. ಮೂಲ ವೇತನ,  ತುಟ್ಟಿಭತ್ಯೆ ಸೇರಿದಂತೆ  ಕಾರ್ಯನಿರ್ವಾಹಕ ಅಧಿಕಾ­ರಿಗಳಿಗೆ ಹೆಚ್ಚಿನ ವೇತನ ನೀಡುತ್ತಿರುವ ದೇಶಗಳ ಸಾಲಿನಲ್ಲಿ ಜರ್ಮನಿ ಮೊದಲ ಸ್ಥಾನದ­ಲ್ಲಿದೆ. ಜರ್ಮನಿಯಲ್ಲಿ ಕಂಪೆ­ನಿಯ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಮಾಸಿಕ ₨50 ರಿಂದ ₨60 ಲಕ್ಷದಷ್ಟು ವೇತನ ಲಭಿಸುತ್ತಿದೆ. ಭಾರತ ಈ ಪಟ್ಟಿ­ಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರ­ತೀಯ ಕಂಪೆನಿಗಳು ಕಾರ್ಯ­ನಿರ್ವಾಹಕ ಅಧಿಕಾರಿಗಳಿಗೆ ಮಾಸಿಕ ₨8ರಿಂದ ₨9 ಲಕ್ಷದಷ್ಟು  ವೇತನ ನೀಡುತ್ತಿವೆ.ಮಾರನ್‌ ದಂಪತಿ ವೇತನ ₨56.25 ಕೋಟಿ

ನವದೆಹಲಿ (ಪಿಟಿಐ):
ಸನ್‌ ಟಿವಿ ಪ್ರವರ್ತಕರಾದ ಕಲಾನಿಧಿ ಮಾರನ್‌ ಮತ್ತು ಅವರ ಪತ್ನಿ ಕಾವೇರಿ, ಭಾರತ­ದಲ್ಲಿ ಅತಿ ಹೆಚ್ಚು ವೇತನ ಪಡೆಯು­ತ್ತಿರುವ ಕಾರ್ಪೊರೇಟ್‌ ಉದ್ಯಮಿಗಳು. ಇವರಿಬ್ಬರು ಕಳೆದ ಹಣಕಾಸು ವರ್ಷದಲ್ಲಿ ತಲಾ ₨56.25 ಕೋಟಿ ವೇತನ ಪಡೆದಿದ್ದಾರೆ. ಮೂರನೆಯ ಸ್ಥಾನದಲ್ಲಿರುವ ಜಿಂದಾಲ್‌ ಕಂಪೆನಿಯ ನವೀನ್‌ ಜಿಂದಾಲ್‌ ವೇತನ ₨54.98 ಕೋಟಿಯಷ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಅವರು ಕಳೆದ ಹಣ­ಕಾಸು ವರ್ಷದಲ್ಲಿ ₨49.62 ಕೋಟಿ ವೇತನ ಪಡೆದಿದ್ದು 4ನೇ  ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry