ವೇತನ ಹೆಚ್ಚಳ ಸಾಧ್ಯತೆ?

7

ವೇತನ ಹೆಚ್ಚಳ ಸಾಧ್ಯತೆ?

Published:
Updated:

ನವದೆಹಲಿ (ಪಿಟಿಐ): ಆರ್ಥಿಕ ಹಿಂಜರಿತ ಭೀತಿಯಿದ್ದರೂ, ಈ ವರ್ಷ ಭಾರತೀಯ ಕಂಪೆನಿಗಳು ಉದ್ಯೋಗಿಗಳ ವೇತನವನ್ನು ಎರಡಂಕಿ ಮಟ್ಟದಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ `ಟೀಂ ಲೀಸ್~ ಸರ್ವೀಸಸ್ ಹೇಳಿದೆ.ನೌಕರರ ಸರಾಸರಿ ವೇತನ ಶೇ 20ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಪ್ರತಿಭೆ-ವೇತನದ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಕಂಪೆನಿಗಳು ಮನಗಂಡಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.ಭಾರತೀಯ ಉದ್ಯೋಗ ಮಾರುಕಟ್ಟೆ ಸ್ಪರ್ಧಾತ್ಮಕವಾಗಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ 20ರಷ್ಟು ಹೊಸ ನೇಮಕ ನಡೆಯುತ್ತಿವೆ. ಪ್ರತಿಭೆ ಆಧರಿಸಿ ಹೊಸ ನೇಮಕಾತಿ ಮತ್ತು ವೇತನ ನಿರ್ಧರಿಸುವ ಪ್ರಕ್ರಿಯೆ ಚುರುಕುಗೊಳಿಸಿವೆ ಎಂದು `ಟೀಂ ಲೀಸ್~  ಹೇಳಿದೆ.2011ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗರಿಷ್ಠ ಮಟ್ಟದಲ್ಲಿ ವೇತನ (ಸರಾಸರಿ ಶೇ 20) ಹೆಚ್ಚಳವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry