ವೇದಿಕ ಗಣಿತ ನೂತನ ಪಠ್ಯದಲ್ಲಿರಲಿ

7

ವೇದಿಕ ಗಣಿತ ನೂತನ ಪಠ್ಯದಲ್ಲಿರಲಿ

Published:
Updated:

ಎನ್‌ಸಿಎಫ್-2005ರ ಆಶಯದಂತೆ ರಾಜ್ಯ ಸರ್ಕಾರ 2012-13ನೇ ಶೈಕ್ಷಣಿಕ ವರ್ಷದಿಂದ ನೂತನ ಕೇಂದ್ರೀಯ ಪಠ್ಯಕ್ರಮದ ಜಾರಿಗೆ ತರಲು ನಿರ್ಧರಿಸಿದೆ. ಅದಕ್ಕೆ ಸಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸೂಕ್ತ.ಮಕ್ಕಳಲ್ಲಿ ಸೃಜನಶೀಲತೆ, ಶಿಸ್ತು, ಹಾಗೂ ತಾರ್ಕಿಕ ಚಿಂತನೆ ಬೆಳೆಸುವಲ್ಲಿ ತನ್ನದೇ ಆದ ವಿಶಿಷ್ಟ ಪ್ರಭಾವ ಬೀರುವ ಗಣಿತ ವಿಷಯದ ಪಠ್ಯ ರಚನೆ ವೇಳೆ `ವೇದಿಕ ಗಣಿತ~ವನ್ನು ಪಠ್ಯದಲ್ಲಿ ಸೇರಿಸುವುದು ಅವಶ್ಯಕ.

 

ಇದರಲ್ಲಿ ವರ್ತಮಾನದ ಹಲವು ಗಣಿತದ ಕ್ಲಿಷ್ಟ ಸಮಸ್ಯೆಗಳಿಗೂ ಚಮತ್ಕಾರ ರೀತಿಯಲ್ಲಿ ಪರಿಹಾರವಿದೆ. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು  ನೂತನ ಕೇಂದ್ರಿಯ ಪಠ್ಯಕ್ರಮಕ್ಕೆ ಹೊಂದಿಕೊಳ್ಳುವುದು ಕಾಗದದಲ್ಲಿ ಹೇಳುವಷ್ಟು ಅದು ಸುಲಭ ಅಲ್ಲ.ವಿದ್ಯಾರ್ಥಿಗಳಲ್ಲಿ ಕೆಲವು ಮೂಲ ಸಾಮರ್ಥ್ಯಗಳನ್ನು ಅಪೇಕ್ಷಿಸುವ ಗಣಿತ ವಿಷಯಕ್ಕೆ ಮಕ್ಕಳನ್ನು ಸಿದ್ಧಗೊಳಿಸಲು ವೇಗವಾಗಿ ಗಣಿತ ಬಿಡಿಸುವ ತಂತ್ರಗಳನ್ನೊಳಗೊಂಡ ವೇದಿಕ ಗಣಿತ ಅವಶ್ಯಕತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry