ವೇಮನರು ಮಹಾಯೋಗಿ: ಎಚ್ಕೆ

7

ವೇಮನರು ಮಹಾಯೋಗಿ: ಎಚ್ಕೆ

Published:
Updated:

ಸವದತ್ತಿ: ಹದಿನಾಲ್ಕನೇ ಶತಮಾನ ದಲ್ಲಿ ತಮ್ಮ ಉನ್ನತವಾದ ವಿಚಾರಗಳ ತತ್ವ, ಸಿದ್ಧಾಂತ, ವಚನಗಳ ಮೂಲಕ ಬಹುದೊಡ್ಡ ಕ್ರಾಂತಿ ಮಾಡುವುದ ರೊಂದಿಗೆ ವೇಮನರು ಮಹಾಯೋಗಿ ಗಳಾಗಿ ಇಡೀ ಸಮಸ್ತ ಮಾನವರಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಇಲ್ಲಿನ ಸುಳ್ಳದ ಕಲ್ಯಾಣ ಮಂಟಪ ದಲ್ಲಿ ನಡೆದ ಮಹಾಯೋಗಿ ವೇಮನರ 599ನೇ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಅಂದು ಸಮಾಜದಲ್ಲಿ ಓರೆಕೊರೆಗಳನ್ನು ಕಂಡು ಅತ್ಯಂತ ಕಠೋರ ವಾಗಿ ಖಂಡಿಸುವುದರೊಂದಿಗೆ ಶೋಷಣೆಗೆ ಒಳಗಾದವರಿಗೆ, ಧ್ವನಿ ಇಲ್ಲದವರಿಗೆ ಧ್ವನಿಯಾದರಲ್ಲದೆ, ಶ್ರಮಜೀವಿಗಳಿಗೆ ಗೌರವಿಸುವಂತೆ ಮಾಡಿದ ಸಮಾನತೆಯ ಹರಿಕಾರರಾಗಿದ್ದಾರೆ ಎಂದರು.ಇಂದಿನ ದಿನಮಾನಗಳಲ್ಲಿ ಎಲ್ಲೆಡೆ ಮೌಲ್ಯಗಳು ಕುಸಿಯುತ್ತಿರುವಾಗ ವೇಮನರ ಸಂದೇಶಗಳು ಸಾಮಾಜಿಕ ಬದಲಾವಣೆ ಸಹಕಾರಿಯಾಗಿವೆ. ಅವರ ವಚನದ ಸಾರದಂತೆ ಬದುಕು ವುದನ್ನು ಕಲಿಯುವ ಅಗತ್ಯವಿದೆ ಎಂದು ಕರೆ ನಿಡಿದರು.ಪ್ರೊ. ವೈ.ಎಂ. ಯಕೊಳ್ಳಿ ಮಾತನಾಡಿ, ಭರತಖಂಡ ಅನೇಕ ಮಹಾ ಮಹಿಮರನ್ನು ಕಂಡಿದೆ. ಅನೇಕ ಶಿವಯೋಗಿಗಳಿಗೆ ಜನ್ಮ ನೀಡಿ ಅಧ್ಯಾತ್ಮ, ಧರ್ಮ, ಸಂಸ್ಕೃತಿ, ಪರಂಪರೆಯ ಶ್ರಿಮಂತಿಕೆ ಹೆಚ್ಚಿಸಿದೆ. ಅವರಲ್ಲಿ ವೇಮನರು ಕ್ರಾಂತಿಕಾರಿ ರತ್ನರಾಗಿ ಬೆಳಗಿದ್ದಾರೆ ಎಂದರು.ಶಿವಬಸವ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಆರ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ. ಸದಸ್ಯ ರವೀಂದ್ರ ಯಲಿಗಾರ, ಅರವಿಂದಗೌಡ ಪಾಟೀಲ, ಪಂಚನಗೌಡ ದ್ಯಾಮನ ಗೌಡರ, ನಿವೃತ್ತ ಐ.ಪಿ.ಎಸ್. ವಿ.ಬಿ. ನಾಗನೂರ, ಎಚ್.ಎಲ್. ಚಿಕ್ಕರಡ್ಡಿ, ಎಸ್. ಎನ್. ಒಂಡಗೂಡಿ, ಜಯಶ್ರೀ ಹೊಸಮನಿ, ವಿ.ಎನ್. ನಿಂಗರಡ್ಡಿ ಹಾಜರಿದ್ದರು.ಜಿ.ಎಸ್. ಕಾಂತನವರ ಸ್ವಾಗತಿಸಿ ದರು. ವೈ.ವಿ. ಮಳಲಿ ನಿರೂಪಿಸಿದರು. ಶಿವು ಜಗಾಪೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry