ಬುಧವಾರ, ಜೂಲೈ 8, 2020
28 °C

ವೇಮನ ದಾರ್ಶನಿಕ ಕವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ’ಮಹಾಯೋಗಿ ವೇಮನರು ತಮ್ಮ ಚೌಪದಿಗಳ ಮೂಲಕ ವಿಶ್ವಕ್ಕೆ ಮಾನವತಾವಾದ ಬೋಧಿಸಿದ ದಾರ್ಶನಿಕ ಕವಿ’ ಎಂದು ಖಜ್ಜಿಡೋಣಿಯ ಶ್ರೆ ಶಂಕರಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶಾಸ್ತ್ರಿಗಳು ಹೇಳಿದರು.ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ಹಾಗೂ ರಡ್ಡಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಮಹಾಯೋಗಿ ವೇಮನ್‌ರ 599ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಉಪನಿಷತ್ತಿನ ಎಲ್ಲ ಸಾರಾಂಶಗಳನ್ನು ವೇಮನರ ವಚನಗಳಲ್ಲಿ ಕಾಣಬಹುದು ಎಂದರು.ವೇಮನರು ತಮ್ಮ ಸ್ವರೂಪ ಜ್ಞಾನ ಮತ್ತು ವೈರಾಗ್ಯದ ಮೂಲಕ ಸಮಾಜದಲ್ಲಿಯ ವಿಘಟನೆಗಳನ್ನು ದೂರ ಮಾಡಿ, ಸರ್ವರಲ್ಲಿ ಸಮಬಾಳು ಮತ್ತು ಸುಂದರ ಬದುಕನ್ನು ನಿರ್ಮಿಸಿ ಯೋಗಿ ಎನಿಸಿಕೊಂಡರು ಎಂದರು.ವೇಮನರ ಕುರಿತಾದ ಹುಟ್ಟಿಕೊಂಡಿರುವ ಕಟ್ಟು ಕಥೆಗಳು ಮತ್ತು ಚಿತ್ರಗಳು ವೇಮನರ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿವೆ. ಅದಕ್ಕಾಗಿ ಇಂದು ಸರಿಯಾದ ಸಂಶೋಧನೆಯ ಮೂಲಕ ನಿಜತ್ವವನ್ನು ಜನರಿಗೆ ತಿಳಿಸುವದು ಅವಶ್ಯವಿದೆ ಎಂದರು.ಧಾರವಾಡದ ನಿವೃತ್ತ ಪ್ರಾಧ್ಯಾಪಕ ಎನ್.ಎಫ್. ಮೇಟಿ ಮಾತನಾಡಿ ವೇಮನರು ವಚನಗಳು ಜೀವನದ ಮೌಲ್ಯಗಳನ್ನು ಸಾರುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ ಎಂ.ಎಚ್. ಸೋನವಾಲ್ಕರ್ ಮಾತನಾಡಿ ವೇಮನರ ತ್ಯಾಗ, ವೈರಾಗ್ಯದ ಜೀವನವು ಅದರ್ಶನೀಯವಾಗಿದ್ದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ತಿದ್ದುವ ಕೆಲಸವಾಗಬೇಕಾಗಿದೆ ಎಂದರು.ಎಂ.ಟಿ. ಹೊಸೂರ, ಎಸ್.ಆರ್. ಸೋನವಾಲ್ಕರ್, ಬಿ.ವಿ. ಗುಲಗಾ ಜಂಬಗಿ, ಎ.ವಿ. ಹೊಸಕೋಟಿ, ಎಸ್.ಎಚ್. ಚಿಪ್ಪಲಕಟ್ಟಿ, ಕಾಡಪ್ಪ ಶಿರೋಳ, ಕೆ.ಬಿ. ಪಾಟೀಲ, ಸುನೀಲ ಸತರಡ್ಡಿ, ಮಲ್ಲಪ್ಪ ಲಂಕೆಪ್ಪನ್ನವರ, ವಿಜಯ ಸೋನವಾಲ್ಕರ್, ಬಿ.ಎಚ್. ಸೊನವಾಲ್ಕರ್, ಸತ್ಯಪ್ಪ ಲಂಕೆಪ್ಪನ್ನವರ, ಕೃಷ್ಣಾ ಗಿರೆಣ್ಣವರ ಮತ್ತಿತರು ಉಪಸ್ಥಿತರಿದ್ದರು.

ಪ್ರಾಚಾರ್ಯ ಆರ್.ಬಿ. ಗಂಗರಡ್ಡಿ ಸ್ವಾಗತಿಸಿದರು. ಬಿ.ಕೆ. ಕಾಡಪ್ಪಗೋಳ ನಿರೂಪಿಸಿದರು. ಪ್ರೊ. ಸುಭಾಸ ಕಮದಾಳ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.