ಶುಕ್ರವಾರ, ನವೆಂಬರ್ 22, 2019
25 °C
ಚುಟುಕು ಗುಟುಕು

ವೇಯ್ನ ಪಾರ್ನೆಲ್ ವಿಚಾರಣೆ

Published:
Updated:

ಮುಂಬೈ (ಪಿಟಿಐ): ರೇವ್ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವೇಯ್ನ ಪಾರ್ನೆಲ್ ಅವರನ್ನು ಪೊಲೀಸರು ಬುಧವಾರ ಮೂರು ಗಂಟೆಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದರು.`ಮಧ್ಯಾಹ್ನ 12.30ರ ಸುಮಾರಿಗೆ ಪಾರ್ನೆಲ್ ವಿಚಾರಣೆ ಆರಂಭವಾಯಿತು. ಈ ವೇಳೆ ಪಾರ್ನೆಲ್ ಹೇಳಿದ್ದನ್ನು ದಾಖಲಿಸಿಕೊಳ್ಳಲಾಗಿದೆ' ಎಂದು ಸುಬರ್ಬನ್ ಜಾಹು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.23 ವರ್ಷದ ಕ್ರಿಕೆಟಿಗ ಪಾರ್ನೆಲ್ ಭಾರತಕ್ಕೆ ಬಂದಾಗ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತದ ಕ್ರಿಕೆಟಿಗ ರಾಹುಲ್ ಶರ್ಮಾ, ಟಿವಿ ನಿರೂಪಕಿ ಅಪೂರ್ವ ಅಗ್ರಿಹೋತ್ರಿ ಮತ್ತು ಶಿಲ್ಪಾ ವಿರುದ್ಧ ಮಾರ್ಚ್ 6ರಂದು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

 

ಪ್ರತಿಕ್ರಿಯಿಸಿ (+)