ಸೋಮವಾರ, ಅಕ್ಟೋಬರ್ 21, 2019
26 °C

ವೇಶ್ಯಾವಾಟಿಕೆ ಆರು ಜನರ ಬಂಧನ

Published:
Updated:

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಯುವತಿಯರು ಸೇರಿ ಆರು ಮಂದಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರ ಸಮೀಪದ ಧನಲಕ್ಷ್ಮಿ ಬಡಾವಣೆಯ ಜಯಕುಮಾರ್ (45), ತಮಿಳುನಾಡು ಮೂಲದ ಎ.ರವಿಚಂದ್ರನ್ (46), ಶಶಿಕುಮಾರ್ (39) ಮತ್ತು ಮೂವರು ಯುವತಿಯರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಾರು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.ಸಿದ್ಧ ಉಡುಪು ವ್ಯಾಪಾರಿಗಳಾದ  ರವಿಚಂದ್ರನ್, ಶಶಿಕುಮಾರ್ ಸಹಕಾರನಗರದ ಅಪಾರ್ಟ್‌ಮೆಂಟ್ ಒಂದರ ಫ್ಲಾಟ್‌ನಲ್ಲಿ ನೆಲೆಸಿದ್ದರು. ಅವರ  ಫ್ಲಾಟ್‌ಗೆ ಆರೋಪಿ ಜಯಕುಮಾರ್ ಯುವತಿಯರನ್ನು ಕರೆದೊಯ್ಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

 

Post Comments (+)