ವೇಶ್ಯಾವಾಟಿಕೆ: 10 ಬಂಧನ

7

ವೇಶ್ಯಾವಾಟಿಕೆ: 10 ಬಂಧನ

Published:
Updated:

ಬೆಂಗಳೂರು:  `ಅಧ್ಯಯನಕ್ಕಾಗಿ ಬಂದವರು~ ಎಂಬ ಸೋಗಿನಲ್ಲಿ ಪೇಯಿಂಗ್ ಗೆಸ್ಟ್ ಆಧಾರದ ಮೇಲೆ ಮನೆಯೊಂದನ್ನು ಪಡೆದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಜಾಲವೊಂದನ್ನು ಭೇದಿಸಿರುವ ನಗರದ ಅಶೋಕನಗರ ಠಾಣೆಯ ಪೊಲೀಸರು ಎಂಟು ಮಂದಿ ಮಹಿಳೆಯರು ಸೇರಿದಂತೆ 10 ಮಂದಿಯನ್ನು ಭಾನುವಾರ ಸಂಜೆ ಬಂಧಿಸಿದ್ದಾರೆ.

 

ಶಾಂತಿನಗರದ ನಂಜಪ್ಪ ವೃತ್ತದ ಬಳಿಯ ಬರ್ಲಿನ್ ಸ್ಟ್ರೀಟ್‌ನಲ್ಲಿರುವ ಮನೆಯಲ್ಲಿ ಕೇರಳ ಮೂಲದ ಆಲಿ ಮತ್ತು ಸಮೀವುಲ್ಲಾ ಸೇರಿದಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಎಂಟು ಮಂದಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry