ಬುಧವಾರ, ಜೂನ್ 16, 2021
28 °C

ವೈಚಾರಿಕತೆಯನ್ನು ಶಂಕಿಸಬೇಕೆ?

ಡಿ. ದೊಡ್ಡಲಿಂಗೇಗೌಡ,ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |


‘ಎತ್ತು ಈತು ಅಂದ್ರೆ ....’  (ಪ್ರ.ವಾ. ಅಭಿಮತ ಪುಟದ ಚರ್ಚೆ ಅಂಕಣ, ಮಾ.7) ಎಂಬ  ಲೇಖ­ನದಲ್ಲಿ ಡಾ.ಬಿ.ವಿ. ವಸಂತಕುಮಾರ್ ಅವರು,   ಹೆಸರಿನಲ್ಲಿ ‘ಜಾತಿ ವಾಚಕ’ವನ್ನು ಕಳೆ­ದು­ಕೊಳ್ಳಲು ಸಾಧ್ಯವಾಗದವರ ವೈಚಾರಿಕತೆಯನ್ನು ಪ್ರಶ್ನಿಸಿದ್ದಾರೆ.

 

‘ಗೌಡ’ ಎಂಬ ಪದ ಹೆಸರಿನಲ್ಲಿ ಇದ್ದಾಕ್ಷಣ, ಇಂಥ ಎಲ್ಲರ ವೈಚಾರಿಕತೆಯನ್ನು ಸಂಶಯಿಸ­ಬೇಕೆ? ಮೇಲಾಗಿ ‘ಗೌಡ’ ಎಂಬುದು ಒಂದು ನಿರ್ದಿಷ್ಟ ಜಾತಿಯವರಿಂದ ಮಾತ್ರ ಬಳಕೆ­ಯಾಗುತ್ತಿಲ್ಲ. ಒಕ್ಕಲಿಗ, ಕುರುಬ, ಲಿಂಗಾಯತ, ಈಡಿಗ, ಗೊಲ್ಲ ಮೊದಲಾದ ವರ್ಗಗಳಲ್ಲಿ ಬಳಕೆಯಾಗುತ್ತಿದೆ. ಇವರ ಸಿದ್ಧಾಂತವನ್ನು ಒಪ್ಪುವು­ದಾದರೆ ರಾವ್‌, ರೆಡ್ಡಿ, ನಾಯ್ಡು, ಭಟ್‌, ಶೆಟ್ಟಿ, ನಾಯಕ ಇಂಥ ಉತ್ತರ ಪದಗಳನ್ನು ಹೆಸರಿನಲ್ಲಿ ಇಟ್ಟುಕೊಂಡಿರುವ ಎಲ್ಲರಿಗೂ ವೈಚಾ­ರಿ­ಕತೆಯಿಂದ ಗೇಟ್‌ ಪಾಸ್‌ ಕೊಡಬೇಕಾಗುತ್ತದೆ. ಇವರ ಮಾತು ನಿಜವಾದರೆ ಬಹಳ ಜನ ಹೆಸರನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

 

‘ಗೌಡ’ ಎಂಬುದನ್ನು ಜಾತೀಯ ಉತ್ತರ ಪದವಾಗಿ ನೋಡದೆ ಬೇರೊಂದು ನೆಲೆಯಲ್ಲಿ ನೋಡಲು ಸಾಧ್ಯವಿಲ್ಲವೆ? ‘ಗೌಡ’– ಎಂದರೆ ಹಿರಿಯ, ನಾಯಕ, ಯಜಮಾನ, ಒಡೆಯ ಎಂದೂ ಅರ್ಥೈಸಬಹುದಲ್ಲವೆ?

 

ನಿರೀಶ್ವರವಾದಿಗಳು ತಮ್ಮ ಹೆಸರಿನಲ್ಲಿ ದೈವದ ಅಂಕಿತವನ್ನು ಇಟ್ಟುಕೊಂಡವರು ಎಷ್ಟೊಂದು ಜನರಿಲ್ಲ? ಶಿವರಾಮ ಕಾರಂತರ ಹೆಸರಿನಲ್ಲಿ ಶಿವ ಮತ್ತು ರಾಮನಿಲ್ಲವೆ? ಇದಕ್ಕಾಗಿ ಇವರ ನಿರೀಶ್ವರ ವಾದವನ್ನು ನಿರಾಕರಿಸಲು ಸಾಧ್ಯವೆ? ಮೂರ್ತಿ ರಾವ್‌ ಎಂದು ಹೆಸರಿಟ್ಟುಕೊಂಡ ತಕ್ಷಣ ಅವರನ್ನು  ವೈಚಾರಿಕತೆಗೆ ಎಳ್ಳು ನೀರು ಬಿಟ್ಟ ಜಾತಿವಾದಿ ಎಂದು ಕರೆಯಲಾಗುತ್ತದೆಯೆ? ಲಕ್ಷ್ಮೀ, ಸರಸ್ವತಿ, ಪಾರ್ವತಿ, ಸುಮಾ, ಲತಾ ಎಂಬ ಹೆಸರಿರುವ ಕಾರಣಕ್ಕೆ ಈ ಹೆಸರಿನ ಸ್ತ್ರೀ ವಾದಿ ಬುದ್ಧಿಜೀವಿ­ಗಳನ್ನು ಸಾರಾಸಗಟಾಗಿ ಹೊರಗಿಡ­ಲಾಗುತ್ತದೆಯೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.