ಮಂಗಳವಾರ, ಮೇ 11, 2021
20 °C

ವೈಚಾರಿಕ ಬದಲಾವಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪ್ರಸ್ತುತ ವೈಚಾರಿಕ ಬದಲಾವಣೆ ಅಗತ್ಯವಾಗಿದೆ ಎಂದು ಬಸವತತ್ವ ಪ್ರಚಾರಕ ಸಿದ್ರಾಮಪ್ಪ ಕಪಲಾಪುರ ನುಡಿದರು.ನಗರದಲ್ಲಿ ಗುರುವಾರ ನಡೆದ ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ `ಮನೆ ಮನೆಗಳ ಅಂಗಳದಲ್ಲಿ ಕಾರ್ಯಕ್ರಮ~ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಬದಲಾವಣೆ ಪ್ರಕೃತಿಯ ನಿಮಯ. ಕೆಲ ಬದಲಾವಣೆ ಕಣ್ಣಿಗೆ ಕಂಡರೆ ಇನ್ನು ಕೆಲವು ಕಾಣುವುದಿಲ್ಲ. ಸದ್ಯ ಆಧ್ಯಾತ್ಮಿಕದ ಜೊತೆಗೆ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಪರಿವರ್ತನೆಯು ಜರೂರಿಯಾಗಿದೆ ಎಂದು ಹೇಳಿದರು.ಶಾಸಕ ರಹೀಮ್‌ಖಾನ್ ಬಸವಜ್ಯೋತಿ ಪ್ರಜ್ವಲಿಸಿದರು. ಪ್ರಮುಖರಾದ ಬಸವರಾಜ ದೇಶಮುಖ ಧ್ವಜಾರೋಹಣ ಮಾಡಿದರು. ಅಕ್ಕ ಅನ್ನಪೂರ್ಣ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಿ. ಕಾಶಿನಾಥಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ರಜಿಯಾ ಉಪಸ್ಥಿತರಿದ್ದರು.ಬಾಬುರಾವ ಮಡಿವಾಳ, ದಿಗಂಬರ ಮಡಿವಾಳ, ಸಂಗಮೇಶ ಏಣಕೂರು, ವಿಜಯಕುಮಾರ ಶಾಸ್ತ್ರಿ, ಶಿವಕುಮಾರ ಹುಚಕನಳ್ಳಿ ಅವರನ್ನು ಸನ್ಮಾನಿಸಲಾಯಿತು. ಆಶಾರಾಣಿ ಮತ್ತು ಸರಿತಾ ಶೆಟಕಾರ ವಚನ ಸಂಗೀತ ನಡೆಸಿಕೊಟ್ಟರು. ದೀಪ್ತಿ ಪಾರಾ ವಚನ ನೃತ್ಯ ಪ್ರಸ್ತುತಪಡಿಸಿದರು. ಸತೀಶ ಮಂಠಾಳೆ ಸ್ವಾಗತಿಸಿದರು. ಕರುಣಾ ಶೆಟಕಾರ ನಿರೂಪಿಸಿದರು. ಪ್ರಭಾವತಿ ಕಪಲಾಪುರೆ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.