ವೈಜಯಂತಿಮಾಲಾಗೆ ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ

7

ವೈಜಯಂತಿಮಾಲಾಗೆ ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ

Published:
Updated:
ವೈಜಯಂತಿಮಾಲಾಗೆ ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಭಾರತೀಯ ವಿದ್ಯಾಭವನವು ನೀಡುವ 2011ನೇ ಸಾಲಿನ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿಯು ಹಿಂದಿ ಚಿತ್ರನಟಿ ಡಾ.ವೈಜಯಂತಿಮಾಲಾ ಬಾಲಿ ಅವರಿಗೆ ಲಭಿಸಿದೆ. 20 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿಯು ರೂ 1ಲಕ್ಷ ನಗದು, ವಿಶೇಷ ಫಲಕವನ್ನು ಒಳಗೊಂಡಿ ದೆ. ಭಾರತೀಯ ವಿದ್ಯಾಭವನವು 2010ನೇ ಸಾಲಿನಿಂದ ಈ ಪ್ರಶಸ್ತಿ ನೀಡುತ್ತಿದ್ದು, ಕಳೆದ ಸಾಲಿನ ಪ್ರಶಸ್ತಿಗೆ ಕನ್ನಡ ಚಿತ್ರನಟಿ ಹರಿಣಿ, ತೆಲುಗು ಹಾಗೂ ತಮಿಳು ಚಿತ್ರ ನಟಿಯರಾದ ಅಂಜಲಿದೇವಿ ಮತ್ತು ಜಮುನಾ ಭಾಜನರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು ಸೆ.29 ರಂದು ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಟ ಅಂಬರೀಷ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry