ಸೋಮವಾರ, ಜೂನ್ 14, 2021
28 °C

ವೈಜ್ಞಾನಿಕ ದೃಷ್ಟಿಕೋನವಿದ್ದ ಸಾಹಿತಿ ತೇಜಸ್ವಿ: ಶಿವಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರು ಸಾಹಿತ್ಯ ಕ್ಷೇತ್ರದಲ್ಲಿ  ವೈಜ್ಞಾನಿಕ ದೃಷ್ಟಿಕೋನ ರೂಢಿಸಿಕೊಂಡಿದ್ದರು ಎಂದು ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಇಲ್ಲಿ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ರಂಗಮಾಧ್ಯಮ, ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕುರಿತು ಏರ್ಪಡಿಸಿದ್ದ `ವಿಚಾರ ಗೋಷ್ಠಿ~ ಮತ್ತು ಡಾ. ಚಂದ್ರುಕಾಳೇನಹಳ್ಳಿ ರಚಿಸಿದ `ಎಲ್ಲಿ ಮೋಹನ ಮುರಲಿ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಈಗಾಗಲೇ ಮೇಲ್ವರ್ಗದವರು ಸರಿ, ತಪ್ಪು ಯಾವುದು ಎಂಬುದನ್ನು ಸಮಾಜದ ಮೇಲೆ ಹೇರಿದ್ದಾರೆ. ಇದೇ ರೀತಿ ವಾಸ್ತು ಇರಬೇಕು. ರಾಹುಕಾಲದಲ್ಲಿ ಉತ್ತಮ ಕೆಲಸ ಕೈಗೊಳ್ಳಬಾರದು ಎಂದಿರುವುದು ಸರಿಯಲ್ಲ.

 

ಆದರೆ ಅಂಬೇಡ್ಕರ್, ಕುವೆಂಪು ಮತ್ತು ತೇಜಸ್ವಿ ಅವರು ಸಮಾಜ ಮುಖಿಯಾಗಿ ಚಿಂತನೆ ನಡೆಸಿದರು. ಇವರ ಕೃತಿಗಳು ಚಲನಶೀಲ ಗುಣ ಹೊಂದಿವೆ ಎಂದರು. ಧನಂಜಯ ಜೀವಾಳ, ಡಾ. ಬೋರೇ ಗೌಡ ಮಠಳಿ,  ಮೇಲಗಿರಿ ಗೌಡ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.