ಶನಿವಾರ, ಜೂನ್ 12, 2021
28 °C

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ವಿಜ್ಞಾನ ಕ್ಷೇತ್ರಕ್ಕೆ ಡಾ. ಸಿ.ವಿ. ರಾಮನ್‌ ಅವರ ಕೊಡುಗೆ ಅನನ್ಯ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಬಾಬುರಾವ್‌ ದಾನಿ ಹೇಳಿದರು.ನಗರದ ಮಾಧವನಗರದ ಜನಸೇವಾ ಶಾಲೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿ.ವಿ. ರಾಮನ್‌ ಅವರ ಸಾವಿರಾರು ಲೇಖನ­­ಗಳು ಪ್ರಕಟಗೊಂಡಿವೆ. ರಾಸಾ­ಯನಿಕ ಪರೀಕ್ಷೆಗಾಗಿ ವಿಶ್ವದ ಅನೇಕ ವಿಜ್ಞಾನಿಗಳು ಅವರ ಲೇಖನಗಳನ್ನು ಅನುಸರಿಸಿದ್ದಾರೆ ಎಂದರು.ಸಂಸ್ಥೆ ಕಾರ್ಯದರ್ಶಿ ರೇವಣಸಿದ್ಧಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತ­ನಾಡಿದರು. ಶಿಕ್ಷಕ ತುಕಾರಾಮ ಭೋಲಾ ಪವಾಡ ಬಯಲು ಕಾರ್ಯಕ್ರಮ ನಡೆಸಿ­ಕೊಟ್ಟರು. ಮುಖ್ಯಶಿಕ್ಷಕಿ ಸಂಗೀತಾ ನಾಗೂರೆ,  ಸೌಭಾಗ್ಯವತಿ, ಸುನಿತಾ, ಬಸವ­ರಾಜೇಶ್ವರಿ, ಮೀನಾಕ್ಷಿ, ನೀಲಮ್ಮ ಇದ್ದರು. ಪಲ್ಲವಿ ಶಿವಕಾಂತ ವಂದಿಸಿ­ದರು.ಬಿವಿಬಿ ಕಾಲೇಜು: ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಭವಿಷ್ಯ­ದಲ್ಲಿ ವಿಜ್ಞಾನಿಗಳಾಗಿ ರೂಪು­ಗೊಳ್ಳಬಹುದು ಎಂದು ಪ್ರಾಚಾರ್ಯ ಡಾ. ಸಿ.ಎಸ್‌. ಪಾಟೀಲ್ ಹೇಳಿದರು. ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತ­ನಾಡಿದರು.ಗ್ರಂಥಪಾಲಕರಾದ ಮೀನಾಕ್ಷಿ ಪಾಟೀಲ್‌ ಮಾತನಾಡಿದರು. ಪ್ರೊ. ರಾಘವೇಂದ್ರ ಡಿ.ಎಚ್‌. ಸ್ವಾಗತಿಸಿದರು. ಮೀರಾ ಖೇಣಿ ನಿರೂಪಿಸಿದರು. ಪ್ರೊ. ರಮಾಕಾಂತ್‌ ವಂದಿಸಿದರು. ಬಸವಕಲ್ಯಾಣ ವರದಿ: ವಿದ್ಯಾರ್ಥಿ­ಗಳು  ಪರೀಕ್ಷೆ ಪಾಸಾದರೆ ಸಾಲದು ಸಂಶೋಧನಾ ಪ್ರವೃತ್ತಿ ಬೆಳೆಸಿ­ಕೊಳ್ಳಬೇಕು ಎಂದು ಉಪನ್ಯಾಸಕ ಸುರೇಶ ಅಕ್ಕಣ್ಣ ಹೇಳಿದರು.ಇಲ್ಲಿನ ಜೆಬಿಕೆ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲ್ಲೂಕು ವಿಜ್ಞಾನ ಪರಿಷತ್ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿಯೊಂದು ವಸ್ತು ಮತ್ತು ಜೀವಿಗಳ ಬಗ್ಗೆ ಹೆಚ್ಚು ತಿಳಿದು­ಕೊಳ್ಳಬೇಕು. ಹೊಸದನ್ನು ಕಂಡು­ಕೊಳ್ಳಲು ಯತ್ನಿಸಬೇಕು ಎಂದರು.ಪರಿಷತ್ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ ಮಾತನಾಡಿ, ವಿಜ್ಞಾನಿ ಸರ್.ಸಿ.ವಿ.ರಾಮನ್‌ ಅವರ ಜೀವನ ಮತ್ತು ಸಾಧನೆ ಕುರಿತು ತಿಳಿಸಿದರು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ರೇಷ್ಮಾ, ಗಣೇಶ, ಮಲ್ಲಿಕಾರ್ಜುನ, ಸೌಂದರ್ಯ ಮತ್ತು ಕರಬಸಪ್ಪ  ಅವರಿಗೆ ಬಹುಮಾನ ವಿತರಿಸಲಾಯಿತು.ಹಿರಿಯ ಶಿಕ್ಷಕ ಸೂರ್ಯಕಾಂತ ಅಂಬಲಗೆ ಇದ್ದರು. ಪ್ರಕಾಶ ಜಾಧವ ಸ್ವಾಗತಿಸಿದರು. ಶಿವಶರಣಯ್ಯ ಮಠಪತಿ ನಿರೂಪಿಸಿದರು.

ಮೋರಖಂಡಿ ಶಾಲೆ: ಮಕ್ಕಳು ಮೂಢ­ನಂಬಿಕೆ, ಕಂದಾಚಾರದಿಂದ ದೂರ ಇರಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ದೇವೇಂದ್ರ ಪಾಟೀಲ ಹೇಳಿದರು.ತಾಲ್ಲೂಕಿನ ಮೋರಖಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಏಜಾಜ್ ಪಟೇಲ್ ಮಾತನಾಡಿ, ವಿಜ್ಞಾನ ದಿನಾಚರಣೆ ಎಲ್ಲ ಶಾಲೆಗಳಲ್ಲಿ ಆಚರಣೆಯಾಗಲಿ. ವಿವಿಧ ಪ್ರಯೋಗಗಳನ್ನು ಮಾಡಲು ವಿದ್ಯಾರ್ಥಿ­ಗಳಿಗೆ ಸಹಕರಿಸಿ ಅವರಲ್ಲಿನ ಸುಪ್ತ ಪ್ರತಿಭೆ  ಪ್ರೋತ್ಸಾಹಿಸಬೇಕು ಎಂದರು.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಾಶಿನಾಥ ಭೆಂಡೆ, ಸಿದ್ಧರಾಜ ಮತ್ತು ಗುಂಡಾಜಿ ಮಾತನಾಡಿದರು. ಸುಭಾಷ್‌ ಮೇತ್ರೆ ಅಧ್ಯಕ್ಷತೆ ವಹಿಸಿ­ದ್ದರು. ಮದನ ಮದಾಲೆ ಸ್ವಾಗತಿಸಿ­ದರು. ಅನಿಲಕುಮಾರ ನಿರೂಪಿಸಿದರು. ವಿಜ್ಞಾನ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಮತ್ತು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಹುಮನಾಬಾದ್‌ ವರದಿ: ಯಾವ ನಾಡು ನಮಗೆ ಅನ್ನ ಮತ್ತು ಅಕ್ಷರ ಜ್ಞಾನ ನೀಡುತ್ತದೋ ಆ ದೇಶದ ಋಣ ತೀರಿಸುವುದು ಪರಮ ಕರ್ತವ್ಯ. ಅದನ್ನು ಬಿಟ್ಟು ಹಣ ಗಳಿಕೆ ಆಸೆಯಿಂದ ವಿದೇಶಕ್ಕೆ ಪಲಾಯನ ಆಗುವುದು ಒಂದು ಬಗೆಯಲ್ಲಿ ದೇಶ ದ್ರೋಹ ಎಂದು ವಿದ್ಯಾರ್ಥಿನಿ ಪದ್ಮಶ್ರೀ ಹೇಳಿದರು. ಪಟ್ಟಣದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರೊ.ಕ್ರಾಂತಿಕುಮಾರ ಮಾತನಾಡಿ, ಶಿಸ್ತುಬದ್ಧ ಅಧ್ಯಯನವೇ ವಿಜ್ಞಾನ ಎಂದರು. ಸರ್‌. ಸಿ ವಿ.ರಾಮನ್‌ ಸಾಧನೆಗಳ ಕುರಿತು ವಿವರಿಸಿದರು. ಪದವಿ ಕಾಲೇಜು ಪ್ರಾಚಾರ್ಯ ವೀರಯ್ಯ ಶಿವಪೂಜಿ ಮಾತನಾಡಿ, ಪ್ರಾಣಿಗಳ ದೇಹದ ಭಾಗಗಳ ಕುರಿತು ಪ್ರಾಯೋಗಿಕ ಅಧ್ಯಯನ ಮಾಡುವುದು ಮಾತ್ರ ವಿಜ್ಞಾನವಲ್ಲ. ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳನ್ನು ವಿಜ್ಞಾನಕಿಂತ ಆಳವಾಗಿ ಶಾಸ್ತ್ರಬದ್ಧ ಅಧ್ಯಯನ ಮಾಡಬಹುದು ಎಂದರು.ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ಆರ್‌.ಜಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಶಾಂತವೀರ ಯಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಅನಿತಾ ಲದ್ದೆ, ಮೀನಾಕ್ಷಿ ಯಡವೆ, ಸ್ಮಿತಾ ಶೀಲವಂತ ಇದ್ದರು.

ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿಜಯಲಕ್ಮಿ ಹಾಗೂ ಶ್ವೇತಾ ಅವರನ್ನು ಸನ್ಮಾನಿಸ­ಲಾಯಿತು.ಸಿದ್ರಾಮಯ್ಯ­ಸ್ವಾಮಿ ಸ್ವಾಗತಿಸಿದರು. ಅರ್ಫಾನ್‌ ಮತ್ತು ವಿದ್ಯಾ ನಿರೂಪಿಸಿದರು. ಪ್ರಾಣೇಶ ವಂದಿಸಿದರು. ಡಾ.ಅಂಬೇಡ್ಕರ್‌ ಪ್ರೌಢಶಾಲೆ: ವಿದ್ಯಾರ್ಥಿ­ಗಳು ವೈಜ್ಞಾನಿಕ ಮನಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಾರುದ್ರಪ್ಪ ಆಣದೂರೆ ಹೇಳಿದರು. ಇಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂ ಗವಾಗಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಸಂಯೋಜಕ ವಿಶ್ವನಾಥ ಪಾಟೀಲ ಮಾತನಾಡಿ, ಯಾವುದೇ ವಿಷಯ ಕುರಿತು ವಿಸ್ತೃತವಾಗಿ ತಿಳಿದು­ಕೊಳ್ಳುವ ಸ್ವಭಾವ ರೂಢಿಸಿಕೊಳ್ಳಬೇಕು ಎಂದರು. ನಿವೃತ್ತ ಶಿಕ್ಷಕ  ಎಂ.ಜಿ ಹವಾಲ್ದಾರ,  ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಪ್ಪ ದಂಡೆ, ರಾಜ್ಯ ವಿಜ್ಞಾನ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾರಾವ ಕುಲಕರ್ಣಿ ಮಾತನಾಡಿದರು.ಮುಖ್ಯಶಿಕ್ಷಕ ರಾಜೇಂದ್ರ ಉಪ್ಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಶಾಸ್ತ್ರಿ ಪಂಚಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ನೀಲಕಂಠೆ ನಿರೂಪಿಸಿದರು. ಸುಧಾಕರ ವಂದಿಸಿದರು. ವಿಶ್ವಭಾರತಿ, ಸಿಬ್ಬಂದಿ ವಿದ್ಯಾರ್ಥಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.