ಭಾನುವಾರ, ಏಪ್ರಿಲ್ 18, 2021
24 °C

ವೈಜ್ಞಾನಿಕ ರೀತಿಯಲ್ಲಿ ಕುರಿ ಸಾಕಲು ಕರೂದಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ‘ಕುರಿ ಸಾಕಾಣಿಕೆ ಲಾಭದಾಯಕ ಉದ್ದಿಮೆಯಾಗಿದ್ದು, ವೈಜ್ಞಾನಿಕ ಹಿನ್ನೆಲೆಯಲ್ಲಿ ಕುರಿ ಸಾಕಾಣಿಕೆ ಮಾಡಬೇಕು. ಸಾಫ್ಟ್‌ವೇರ್ ಎಂಜಿನಿಯರ್ ಕೂಡ ಕುರಿಸಾಕಾಣಿಕೆ, ಹೈನುಗಾರಿಕೆ, ಕೃಷಿಯತ್ತ ವಾಲುತ್ತಿದ್ದಾರೆ’ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅ.ನಿ. ಅಧ್ಯಕ್ಷ ಭೋಜರಾಜ ಕರೂದಿ ಹೇಳಿದರು. ನಗರದ  ಕುರಿ ಉಣ್ಣೆ ಮತ್ತು ಅಭಿವೃದ್ಧಿ ಯೋಜನೆ ಕಚೇರಿಯಲ್ಲಿ ಜಿ.ಪಂ. ಕುರಿ ಉಣ್ಣೆ ಮತ್ತು ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಏರ್ಪಡಿಸಿದ್ದ ಸರ್ಕಾರದ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸರ್ಕಾರ ಕುರಿ ಸಾಕಾಣಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ರೂ. 10 ಕೋಟಿ ವೆಚ್ಚದಲ್ಲಿ  2050 ಫಲಾನುಭವಿಗಳಿಗೆ ತಲಾ 10 ಕುರಿ ಒಂದು ಟಗರು ಘಟಕ ಮಾಡಿಕೊಡುವ ಉದ್ದೇಶ ಹೊಂದಿದೆ. ಕೆ.ಎಂ.ಎಫ್. ಮಾದರಿಯಲ್ಲಿ ನಿಗಮ ಅಭಿವೃದ್ಧಿ ಪಡಿಸಲಾಗುವುದು. ಆರೋಗ್ಯ ಇಲಾಖೆಯ 108 ಅಂಬುಲೆನ್ಸ್ ಯೋಜನೆಯಂತೆ  ಪಶು ಇಲಾಖೆಗೂ 108 ವಾಹನ ವ್ಯವಸ್ಥೆ ಮಾಡಲಾಗುವುದು’ ಎಂದು ಕರೂದಿ ತಿಳಿಸಿದರು.‘ನಿಗಮದ ವತಿಯಿಂದ ಮಾರುಕಟ್ಟೆ ಪ್ರಾರಂಭಿಸಲಾಗುವುದು. ನಬಾರ್ಡ ಯೋಜನೆಯಡಿ 500 ಕುರಿ ಸಾಕಾಣಿಕೆ ಮಾಡಲು ಮುಂದೆ ಬಂದವರಿಗೆ ಸರ್ಕಾರ ಶೇ. 25 ರ ಸಹಾಧನದಲ್ಲಿ 25 ಲಕ್ಷ ರೂಪಾಯಿ ಸಾಲ ನೀಡಲಿದೆ’ ಎಂದರು. ಜಿ.ಪಂ. ಅಧ್ಯಕ್ಷ ಮಂಜುನಾಥ ಎಚ್. ಓಲೇಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಾವೇರಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಟಿ. ಶಿವರಾಮ ಭಟ್ ತಾಂತ್ರಿಕ ತರಬೇತಿ ನೀಡಿದರು.ಡಾ. ರಾಮಪ್ಪ, ಕಾಕೋಳ ತಾ.ಪಂ. ಕ್ಷೇತ್ರದ ಬಸವನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಕುರಿಸಾಗಾಣಿಕಾ ಫಲಾನುಭವಿಗಳು ಉಪಸ್ಥಿತರಿದ್ದರು. ಎಲ್.ಎಂ. ಕಾಮನಹಳ್ಳಿ ಪ್ರಾರ್ಥಿಸಿದರು. ಡಾ.ಎನ್.ಎಸ್. ಅಂಗಡಿ ಸ್ವಾಗತಿಸಿದರು. ಅಧೀಕ್ಷಕ ಜಿ.ಪಿ. ಸುಧಾಕರರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸಪ್ಪ ಜಲ್ಲೇರ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.