ಸೋಮವಾರ, ನವೆಂಬರ್ 18, 2019
27 °C

ವೈದಿಕ ಗಣಿತ: ಕಲಿಕೆಯ ದಾರಿದೀಪ

Published:
Updated:

ಗಣಿತ ಎನ್ನುವ ಗುಮ್ಮನಿಗೆ ಹೆದರಿ ಬೆವರುವ ಮಕ್ಕಳಿಗೆ ಗಣಿತದ ಗೆಳೆತನ ಹಚ್ಚುವ ತಂತ್ರ ವೈದಿಕ ಗಣಿತ. ಗಣಿತವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಈ ತಂತ್ರಗಳನ್ನು ಕಲಿತ ಮಕ್ಕಳು ಗಣಿತವನ್ನು ಒಂದು ವಿಷಯದಂತೆ ಅಲ್ಲ, ಬದಲಾಗಿ ಒಂದು ಆಟದಂತೆ ನಿರ್ವಹಿಸುತ್ತಾರೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಮಕ್ಕಳ ಮೆದುಳಿನಲ್ಲಿ ಸ್ಥಾನ ಪಡೆದ ವೈದಿಕ ಗಣಿತ ಇತ್ತೀಚೆಗೆ ನಗರದಲ್ಲಿಯೂ ಅನೇಕರನ್ನು ಆಕರ್ಷಿಸುತ್ತಿದೆ.ಪ್ರಾಚೀನ ಪದ್ಧತಿಯ ಗಣಿತಶಾಸ್ತ್ರವೇ ವೇದ ಗಣಿತ ಅಥವಾ ವೈದಿಕ ಗಣಿತ. ಇದು ಕ್ಷಿಪ್ರ ಎಣಿಕೆ ರಹಸ್ಯಗಳನ್ನು ಒಳಗೊಂಡ ಹಾಗೂ ಗಣಿತ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಹಾಯವಾಗುವ 16 ಮೂಲ ಸೂತ್ರಗಳು ಹಾಗೂ 13 ಉಪ ಸೂತ್ರಗಳನ್ನು ಆಧರಿಸಿದ ವಿಶಿಷ್ಟ ಪದ್ಧತಿ.ಈ ಪಠ್ಯ ವೈದಿಕ ಗಣಿತಶಾಸ್ತ್ರ ಮೂಲತತ್ವಗಳನ್ನು ಒಳಗೊಂಡಿದೆ. ಸಂಕೀರ್ಣ ಸಂಖ್ಯಾಶಾಸ್ತ್ರವನ್ನು ಸರಳ ಮಾದರಿಯಲ್ಲಿ ಹೇಗೆ ಬಿಡಿಸುವುದು ಎಂಬ ಬಗ್ಗೆ ಇಲ್ಲಿ ಕಲಿಸಿಕೊಡಲಾಗುವುದು. ಗಣಿತ ಎಂದರೆ ಕಠಿಣ ವಿಷಯವಲ್ಲ, ಅರಿತುಕೊಂಡರೆ ಅದು ಮಲ್ಲಿಗೆಯಷ್ಟು ಮೃದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಗುವುದು.ಇದರಲ್ಲಿ ಒಟ್ಟು ಐದು ಹಂತಗಳಿದ್ದು, ಪ್ರತಿ ಹಂತವೂ ಮೂರು ತಿಂಗಳು, 12 ತರಗತಿಗಳನ್ನು ಒಳಗೊಂಡಿದೆ. ಕೋರ್ಸ್‌ನ ಒಟ್ಟು ಅವಧಿ ಸುಮಾರು 15 ತಿಂಗಳು. ಮೂಲ ಅಂಕಗಣಿತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಮಕ್ಕಳಿಗೆ ಈ ತರಬೇತಿ ಉಪಯುಕ್ತ.ಸಾಮಾನ್ಯವಾಗಿ ಐದನೇ ತರಗತಿಯ ನಂತರ ವಿದ್ಯಾರ್ಥಿಗಳು ಈ ತರಬೇತಿ ಪಡೆಯುವ ಸಾಮರ್ಥ್ಯ ಹೊಂದುತ್ತಾರೆ. ಆದರೆ ಇದು ಟ್ಯೂಷನ್ ಅಲ್ಲ, ಏಕೆಂದರೆ ಇಲ್ಲಿ ಪಠ್ಯಕ್ರಮವನ್ನು ಅನುಸರಿಸುವುದಿಲ್ಲ, ಅದಕ್ಕೆ ಪೂರಕವಾದ ತಂತ್ರಗಳನ್ನು ಮಾತ್ರ ಕಲಿಸಿಕೊಡಲಾಗುತ್ತದೆ.ಕಷ್ಟಕರ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಸಂಕಲನಗಳನ್ನು ವೈದಿಕ ತಂತ್ರ ಬಳಸಿ ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ಮಾಡಿ ಮುಗಿಸಬಹುದು. ವಿಷಯವನ್ನು ಇಡಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಹೊರೆಯನ್ನು ಇದು ತಪ್ಪಿಸುತ್ತದೆ. ಕೇವಲ 9ರವರೆಗಿನ ಪಟ್ಟಿಯನ್ನು ನೆನಪಿನಲ್ಲಿಟ್ಟುಕೊಂಡರೆ ಸಾಕು, ಈ ಮಾದರಿಯ ಸಹಾಯದಿಂದ ಯಾವುದೇ ಲೆಕ್ಕವನ್ನು ಮಾಡಬಹುದು.

ಮಾಹಿತಿಗೆ: 98807 70961ಮೋಜಿನ ಆಟವಾಗಲಿ ಗಣಿತ

ಈ ತರಬೇತಿ ಪಡೆಯುವ ಮಕ್ಕಳು ಗಣಿತವನ್ನು ಪ್ರೀತಿಸಲು ಆರಂಭಿಸುತ್ತಾರೆ. ಸಂಖ್ಯಾತ್ಮಕ ಸಮಸ್ಯೆಗಳನ್ನು ಬಿಡಿಸುವ ಪ್ರಕ್ರಿಯೆ ಸಾಮಾನ್ಯಕ್ಕಿಂತ 10-15 ಪಟ್ಟು ವೇಗವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈದಿಕ ಗಣಿತದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡುತ್ತಿದೆ.ಬೆಂಗಳೂರಿನಲ್ಲಿ ಈ ಬಗ್ಗೆ ಒಲವು ಹೆಚ್ಚುತ್ತಿದ್ದು, ಜನರು ವೈದಿಕ ಗಣಿತದ ತರಬೇತಿ ಕೇಂದ್ರಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಸರಳವಾಗಿ, ಸುಲಭವಾಗಿ ಹಾಗೂ ವೇಗವಾಗಿ ಪರಿಹರಿಸುವಂತಾದರೆ ಅರ್ಧ ಸಮಸ್ಯೆ ಪರಿಹಾರವಾದಂತೆ. ಆದರೆ ತರಬೇತಿ ಕೇಂದ್ರಗಳನ್ನು ಆರಿಸುವಾಗ ಪಾಲಕರು ಬಹಳ ಮುತುವರ್ಜಿ ವಹಿಸಬೇಕಾಗುತ್ತದೆ.

-ವಿನಯ್ ಹೆಗಡೆ, ನಿರ್ದೇಶಕರು, ವಿಜ್ ಕಿಡ್ಸ್

ಪ್ರತಿಕ್ರಿಯಿಸಿ (+)