ವೈದೇಹಿಗೆ ಚಾಲನೆ

7

ವೈದೇಹಿಗೆ ಚಾಲನೆ

Published:
Updated:
ವೈದೇಹಿಗೆ ಚಾಲನೆ

ಎಂ.ಎನ್.ವರದರಾಜು ನಿರ್ಮಾಣದ ಮಹರ್ಷಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `ವೈದೇಹಿ~ ಚಿತ್ರಕ್ಕೆ ಮುಹೂರ್ತ ನೆರವೇರಿತು. ನಾಯಕ ನಾಯಕಿಯ ಬಳಿ ಪ್ರೇಮ ನಿವೇದನೆ ಮಾಡುವ ಪ್ರಥಮ ಸನ್ನಿವೇಶಕ್ಕೆ ಪ್ರಚಾರಕಲೆಯಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ಕ್ಲಾಪ್ ಮಾಡಿದರು. ಸುರೇಂದ್ರಗೌಡ ಕ್ಯಾಮೆರಾಗೆ ಚಾಲನೆ ನೀಡಿದರು.   

ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ಸಾಗರ್ ಭೂಷಣ ಸಂಗೀತ ನಿರ್ದೇಶನ ಮಾಡಿದ್ದಾರೆ. ನವೀನ್‌ಕೃಷ್ಣ ಮತ್ತು ನಿತಿನ್(ಮಾಗಡಿ) ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ದಿಶಾ ಪೂವಯ್ಯ. ಶಂಕರ್ ಛಾಯಾಗ್ರಹಣ, ಅರವಿಂದ್ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನ ಚಿತ್ರಕ್ಕಿದೆ.

ಮೈಸೂರಿನಲ್ಲಿ `ಕಾಲಾಯ ತಸ್ಮೈ ನಮಃ~

ಯೋಗೀಶ್, ಮಧುಬಾಲಾ ಅಭಿನಯದ `ಕಾಲಾಯ ತಸ್ಮೈ ನಮಃ~ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಚಿತ್ರತಂಡ ತೆರಳಿದೆ. ನಂಜನಗೂಡು ಮತ್ತು ಮೈಸೂರಿನ ಕಾಲೇಜಿನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ನಿರ್ದೇಶಕ ಚಂದ್ರಶೇಖರ್ ಶ್ರೀ ವಾತ್ಸವ್ ಅವರೇ ರಚಿಸಿದ್ದಾರೆ. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ ಮಾಡಿದ್ದಾರೆ. ರಂಗಾಯಣ ರಘು, ರವಿಕಾಳೆ, ರಾಜು ತಾಳಿಕೋಟೆ, ಶಂಕರ್ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ, ಪ್ರೇಮಲತಾ, ಜಯಸಿಂಹ ಮುಸುರಿ ಮುಂತಾದವರು ಅಭಿನಯಿಸುತ್ತಿದ್ದಾರೆ.

`ತವರಿನ ಋಣ~ ಚಿತ್ರಕ್ಕೆ `ಯು~ ಪ್ರಮಾಣಪತ್ರ

ರಮೇಶ್‌ರಾಜು ನಿರ್ದೇಶನದ, ಶ್ರೀರಾಮರೆಡ್ಡಿ ಮತ್ತು ವರದರಾಜು ನಿರ್ಮಾಣದ `ತವರಿನ ಋಣ~ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ಯು~ ಪ್ರಮಾಣ ಪತ್ರ ನೀಡಿದೆ. ಪೂಜಾಗಾಂಧಿ, ಪರಮೇಶ್, ಶ್ರೀರಾಮರೆಡ್ಡಿ, ರಮೇಶ್‌ಭಟ್, ಕೃಷ್ಣೇಗೌಡ, ಗಿರಿಜಾ ಲೋಕೇಶ್, ಅಚ್ಯುತರಾವ್, ಪದ್ಮಜಾರಾವ್, ತಬಲಾನಾಣಿ, ಮುನಿ, ವಾಣಿಶ್ರೀ ಚಿತ್ರದ ಭೂಮಿಕೆಯಲ್ಲಿದ್ದಾರೆ. ಜಗದೀಶ್‌ವಾಲಿ ಛಾಯಾಗ್ರಹಣ, ಅಭಿಮನ್‌ರಾಯ್ ಸಂಗೀತ, ಎಲ್.ಎನ್.ಮೂರ್ತಿ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ ಚಿತ್ರಕ್ಕಿದೆ.

`ಪುನೀತ್~ ಪ್ರಥಮ ಪ್ರತಿ ಸಿದ್ಧ

ನೀಲ್‌ಕಮಲ್ ನಿರ್ದೇಶನದ `ಪುನೀತ್~ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ `ಯು~ ವರ್ಗಕ್ಕೆ ಸೇರಿಸಿದ್ದಾರೆ. ಪ್ರೇಮಕಥೆಯ ಈ ಚಿತ್ರಕ್ಕೆ ದಿಲೀಪ್ ಪೈ. ನಿಶಾ ಶೆಟ್ಟಿ ನಾಯಕ ನಾಯಕಿಯರು. ರಾಮಕೃಷ್ಣ, ಭವ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನಿರ್ದೇಶಕ ನೀಲ್‌ಕಮಲ್ ಅವರದು. ಕಬೀರ್‌ರಾಜ್ ಸಂಗೀತ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry