ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ದಲೈಲಾಮ

ಧರ್ಮಶಾಲಾ, ಹಿಮಾಚಲ ಪ್ರದೇಶ (ಪಿಟಿಐ): ಟಿಬೆಟ್ ಧರ್ಮಗುರು ದಲೈಲಾಮ, ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳವಾರ ಅಮೆರಿಕಕ್ಕೆ ತೆರಳಿದರು.
ಈ ಸಂಬಂಧ ಧರ್ಮಶಾಲಾದ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಅಮೆರಿಕದ ಮಿನಿಸೊಟಾದ ರೋಚೆಸ್ಟರ್ನಲ್ಲಿರುವ ಮೇಯೊ ಕ್ಲಿನಿಕ್ನಲ್ಲಿ ಜನನೇಂದ್ರಿಯ ಗ್ರಂಥಿ (ಪ್ರಾಸ್ಟ್ರೇಟ್) ಸಂಬಂಧದ ಸಮಸ್ಯೆಗೆ ಚಿಕಿತ್ಸೆ ಪಡೆಯಲಿದ್ದು, 30 ದಿನಗಳ ಕಾಲ ಅಲ್ಲಿಯೇ ಇರಲಿದ್ದಾರೆ ಎಂದು ತಿಳಿಸಲಾಗಿದೆ.
ಆದರೆ ಈ ಬಗ್ಗೆ ಟೆಬೆಟನ್ ದೇಶಾಂತರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಕ್ಕೆ ದಲೈಲಾಮ ಭೇಟಿ ಕಾರಣ ಈಗಾಗಲೇ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ಮಾರ್ಚ್ಗೆ ಮುಂದೂಡಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿಯೂ 80ರ ಹರೆಯದ ದಲೈಲಾಮ ಅಮೆರಿಕದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.