ಗುರುವಾರ , ಮೇ 26, 2022
30 °C

ವೈದ್ಯಕೀಯ ನೊಬೆಲ್ ಪ್ರಶಸ್ತಿ: ಮೂವರು ವಿಜ್ಞಾನಿಗಳ ಬಗಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್ ಹೋಂ (ಎಎಫ್ ಪಿ): ನಿರೋಧಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಂಶೋಧನೆ ಮಾಡಿ ಕ್ಯಾನ್ಸರ್ ಮತ್ತು ಇತರ ರೋಗಗಳ ನಿವಾರಣೆ ಬಗ್ಗೆ ಹೊಸಭರವಸೆ ಮೂಡಿಸಿದ ಮೂವರು ವಿಜ್ಞಾನಿಗಳು ಪ್ರಸ್ತುತ ಸಾಲಿನಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.



ಅಮೆರಿಕದ ಬ್ರೂಸ್ ಬ್ಯೂಟ್ಲರ್, ಲಕ್ಸಿಂಬರ್ಗ್ ನ ಜೂಲೆಸ್ ಹೊಫ್ಮನ್ ಮತ್ತು ಕೆನಡಾದ ರಾಲ್ಫ್ ಸ್ಟೀನ್ಮನ್ ಪ್ರಶಸ್ತಿಗೆ ಪಾತ್ರರಾಗಿರುವ ವಿಜ್ಞಾನಿಗಳು.



ದೇಹದ ಸಂಕೀರ್ಣ ರಕ್ಷಣಾ ವ್ಯವಸ್ಥೆಯಾದ ~ನಿರೋಧಕ ವಿಜ್ಞಾನ~ಕ್ಕೆ ಸಂಬಂಧಿಸಿದಂತೆ ಮಾಡಿದ ಸಾಧನೆಗಾಗಿ ಈ ಮೂವರನ್ನು ನೊಬೆಲ್ ಪ್ರಶಸ್ತಿ ಸಮಿತಿ ಶ್ಲಾಘಿಸಿದೆ.

 

ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ದಾಳಿ ನಡೆಸುವ ರೋಗಾಣುಗಳು ಮತ್ತು ವೈರಸ್ ಗಳಿಗೆ ಪ್ರತಿಕ್ರಿಯೆಯಾಗಿ ಅಣುಗಳು ಅಪಾರ ಸಂಖ್ಯೆಯಲ್ಲಿ ಪ್ರತಿವಿಷ ಮತ್ತು ಕೊಲ್ಲುವ ಕೋಶಗಳನ್ನು ಬಿಡುಗಡೆ ಮಾಡುತ್ತವೆ. ಇದನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅಸ್ತಮಾ, ಕೀಲು ನೋವುಗಳು, ಕ್ರೋನ್ಸ್ ರೋಗ ಇತ್ಯಾದಿ ರೋಗಗಳಿಗೆ ಔಷಧ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಈ ಮೂವರು ವಿಜ್ಞಾನಿಗಳು ನೀಡಿರುವ ಕೊಡುವ ಅಪ್ರತಿಮ ಎಂದು ಪ್ರಶಸ್ತಿ ಸಮಿತಿ ಕೊಂಡಾಡಿದೆ.

,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.