ವೈದ್ಯನಾಥನ್ ವರದಿ: ಸಹಕಾರ ಸಂಘ ಪುನಶ್ಚೇತನ

7

ವೈದ್ಯನಾಥನ್ ವರದಿ: ಸಹಕಾರ ಸಂಘ ಪುನಶ್ಚೇತನ

Published:
Updated:

ಬಾಳೆಹೊನ್ನೂರು: ಸರ್ಕಾರ ಜಾರಿಗೆ ತಂದಿರುವ ವೈದ್ಯನಾಥನ್ ವರದಿ ಅನುಷ್ಠಾದಿಂದ ಬಂದ ಸಹಾಯಧನ ಗಳಿಂದ ಸಹಕಾರ ಸಂಘಗಳು ಪುನಶ್ಚೇತ ನಗೊಳ್ಳುತ್ತಿವೆ ಎಂದ ಶಿವಮೊಗ್ಗದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಅಪರೇಟಿವ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ಎನ್.ರವಿ ತಿಳಿಸಿದರು.ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಲೇಜು ವತಿಯಿಂದ ಶಿಕ್ಷಣಾರ್ಥಿಗಳಿಗೆ ಇತ್ತೀಚೆಗೆ ಕೈಗೊಂಡ ಅಧ್ಯಯನ ಪ್ರವಾಸದಲ್ಲಿ ಅವರು ಮಾತನಾಡಿದರು.ಸರ್ಕಾರದಿಂದ ಇತರೆ ಸಹಾಯಧನ ಪಡೆಯದೆ ಲಾಭದಲ್ಲಿ ಮುನ್ನಡೆ ಯುತ್ತಿರುವ ಸ್ಥಳೀಯ ಸಂಘ ಇತರೆ ಸಂಘಗಳಿಗೆ ಮಾದರಿಯಾಗಿದೆ. ಪ್ರಾಮಾಣಿಕತೆ, ಕ್ರಿಯಾಶೀಲತೆಯಿಂದ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೆ.ಕೆ.ವೆಂಕಟೇಶ್ ಮಾತ ನಾಡಿ, ಆಡಳಿತ ಮಂಡಳಿಗಳು ಕಾನೂ ನನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಅವ್ಯವಹಾರಗಳು ನಡೆಯಲು ಸಾಧ್ಯ ವಿಲ್ಲ. ಕೆಲವೆಡೆ ಮುಖ್ಯಕಾರ್ಯ ನಿರ್ವ ಣಾಧಿಕಾರಿಗಳ ಬೇಜವಾಬ್ದಾರಿಯಿಂದ ಸಹಕಾರ ಸಂಘಗಳು ನಷ್ಟ ಅನುಭವಿ ಸುತ್ತಿರವುದು ವಿಶಾದ ಎಂದರು. ಸಂಘದ ಅಧ್ಯಕ್ಷ ಕೆ.ಕೆ.ಸುಧಾಕರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಟಿ.ವೆಂಕ ಟೇಶ್, ಉಪನ್ಯಾಸಕ ಮೋಹನ್, ಗುರುರಾಜ, ನಿರ್ದೇಶಕರಾದ ಕೆ.ಟಿ. ಗೋವಿಂದೇಗೌಡ, ಬಿ.ಬಿ.ಉಮಾ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರು ಷಭಟ್, ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಸೂರ್ಯನಾರಾಯಣ, ಎಚ್.ಎಂ.ವೆಂಕಟೇಶ್, ಎಚ್.ಉಮೇಶ್, ಕೆ.ಆರ್.ರಮ್ಯಾ,  ಡಿ.ರಾಜೇಂದ್ರ, ಕೃಷ್ಣಪ್ಪ, ಮಂಜಪ್ಪ ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry