ವೈದ್ಯನಾಥ್ ವರದಿ ಅನುಷ್ಠಾನಗೊಳಿಸಿ

7

ವೈದ್ಯನಾಥ್ ವರದಿ ಅನುಷ್ಠಾನಗೊಳಿಸಿ

Published:
Updated:

ಬೇಲೂರು:  ‘ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಪರಿಹರಿಸಲು ನಾಲ್ಕು ವರ್ಷಗಳ ಹಿಂದೆ ಸರ್ಕಾರಕ್ಕೆ ನೀಡಿರುವ ಪ್ರೊ.ವೈದ್ಯನಾಥನ್ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು. ತಾಲ್ಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನ ಹಾಗೂ ನೇತಾಜಿ ಸುಭಾಷ್ ಚಂದ್ರಬೋಸರ್ ರವರ 114ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.‘ದೈಹಿಕ ಶಿಕ್ಷಕರಿಗೂ ಶಿಕ್ಷಕರ ಸ್ಥಾನಮಾನ ನೀಡಬೇಕು. ಬಡ್ತಿ ಸೌಲಭ್ಯದ ಜೊತೆಗೆ ದೈಹಿಕ ಶಿಕ್ಷಣದ ಪಠ್ಯಕ್ರಮ ಜಾರಿಗೆ ತಂದು ಮೌಲ್ಯಮಾಪನ ಮಾಡಿ ಅಂಕಪಟ್ಟಿ ನೀಡುವ ವ್ಯವಸ್ಥೆ, ಜತೆಗೆ ವೃಂದ ನೇಮಕಾತಿ ನಿಯಮ್ಮಕ್ಕೆ ಬದಲಾವಣೆ ತರಬೇಕು ಎಂದು ವ್ಯದ್ಯನಾಥನ್ ವರದಿ ಹೇಳಿದೆ. ಈ ವರದಿಯ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು. ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಬಿಪಿಎಡ್ ವ್ಯಾಸಂಗ ಮಾಡಲು ನೀಡುತ್ತಿದ್ದ ರಜೆ ಸೌಲಭ್ಯವನ್ನು ತೆಗೆದು ಹಾಕಲಾಗಿದ್ದು, ಈ ಸೌಲಭ್ಯವನ್ನು ಪುನಃ ಜಾರಿಗೊಳಿಸುವುದರ ಜತೆಗೆ ಗ್ರೇಡ್ 2 ಶಿಕ್ಷಕರಿಗೆ ಆಗುತ್ತಿರುವ ವೇತನ ತಾರತಮ್ಯ ಹೋಗಲಾಡಿಸ ಬೇಕು’ ಎಂದು ಆಗ್ರಹಿಸಿದರು. ಶಾಸಕ ವೈ.ಎನ್.ರುದ್ರೇಶ್‌ಗೌಡ, ಪುರಸಭಾಧ್ಯಕ್ಷ ಎಚ್.ಎಂ. ದಯಾನಂದ್, ಅಥ್ಲೆಟಿಕ್ ತರಬೇತು ದಾರ ಡಾ.ಲಕ್ಷ್ಮೀಶ್, ತಹಶೀಲ್ದಾರ್ ಪಿ.ಜಿ.ನಟರಾಜ್, ಬಿ.ಇ.ಓ. ಕೆ.ಎಸ್.ಪ್ರಕಾಶ್, ದೈಹಿಕ ಶಿಕ್ಷಣ ಪರಿವೀಕ್ಷಕ ರಂಗಸ್ವಾಮಿ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಪದಾಧಿಕಾರಿ ಗಳಾದ ಚಕ್ರಪಾಣಿ, ಭದ್ರೇಗೌಡ, ಪಾಲಾಕ್ಷಮೂರ್ತಿ, ಗೌಡೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry