ವೈದ್ಯರ ನಿರ್ಲಕ್ಷ್ಯ: ತನಿಖೆಗೆ ಆದೇಶ

7

ವೈದ್ಯರ ನಿರ್ಲಕ್ಷ್ಯ: ತನಿಖೆಗೆ ಆದೇಶ

Published:
Updated:

ಬೆಂಗಳೂರು: ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿ 2010ರ ಮೇ 6ರಂದು, ವೈದ್ಯರ ನಿರ್ಲಕ್ಷ್ಯದ ಕಾರಣ ರೋಗಿ­ಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕುರಿತು ಲೋಕಾ­ಯುಕ್ತ  ವರದಿ ಆಧರಿಸಿ, ಹೊಸದಾಗಿ ತನಿಖೆ ನಡೆಸ­ಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೇಜರ್‌ (ನಿವೃತ್ತ) ಪಂಕಜ್‌ ರೈ ಅವರ ಪತ್ನಿ ಸೀಮಾ ರೈ ಎಂಬುವರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕಾರಣ ಮೃತಪಟ್ಟರು ಎಂದು ಆರೋಪಿಸಲಾಗಿದೆ.ಆಸ್ಪತ್ರೆಯು ಜಠರ ಮತ್ತು ಮೇದೋಜ್ಜೀರಕಕ್ಕೆ ಸಂಬಂಧಿ­ಸಿದ ಕೆಲವು ನಿರ್ದಿಷ್ಟ ಶಸ್ತ್ರ­ಚಿಕಿತ್ಸೆಗಳನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್‌ನ ಏಕ­ಸದಸ್ಯ ಪೀಠ ನೀಡಿರುವ ಆದೇಶ ಪ್ರಶ್ನಿಸಿ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ ಸಲ್ಲಿಸಿರುವ ಮೇಲ್ಮನವಿ ಇದಾಗಿದೆ. ನ್ಯಾಯಮೂರ್ತಿ ಎನ್‌. ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ಇದರ ವಿಚಾರಣೆ ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry