ವೈದ್ಯರ ನೇಮಕ ಕೋರಿ ಪ್ರತಿಭಟನೆ

ಗುರುವಾರ , ಜೂಲೈ 18, 2019
24 °C

ವೈದ್ಯರ ನೇಮಕ ಕೋರಿ ಪ್ರತಿಭಟನೆ

Published:
Updated:

ಮೂಡಿಗೆರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಿ, ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಜೈಭೀಮ್ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಯು.ಬಿ.ಮಂಜಯ್ಯ ಒತ್ತಾಯಿಸಿದರು.ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಗುರುವಾರ ಸಂಘದ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಮಾಜದ ಬಡ ಜನರೇ ಹೆಚ್ಚಾಗಿ ಆಶ್ರಯಿಸಿರುವ ಎಂಜಿಎಂ ಆಸ್ಪತ್ರೆಗೆ ಕಳೆದ ಹತ್ತು ವರ್ಷಗಳಿಂದಲೂ ಅಗತ್ಯ ಪ್ರಮಾಣದ ವೈದ್ಯರನ್ನು ನೇಮಕಗೊಳಿಸಿಲ್ಲ. ಎಂಜಿಎಂ ಆಸ್ಪತ್ರೆಯಲ್ಲಿ 16 ವೈದ್ಯರ ಹುದ್ದೆಗಳಿದ್ದು, ಕೇವಲ ನಾಲ್ಕು ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ತುರ್ತು ಸಂದರ್ಭದಲ್ಲಿ ಲಭ್ಯವಿರುವ ವೈದ್ಯರಿಂದ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ಎರಡು ತಿಂಗಳ ಹಿಂದೆ ಎಂಜಿಎಂ ಆಸ್ಪತ್ರೆಯಲ್ಲಿದ್ದ ಎಳು ಜನ ವೈದ್ಯರಲ್ಲಿ ಮೂವರನ್ನು ಬೇರೆಡೆಗೆ ವರ್ಗಾವಣೆಗೊಳಿಸಿದ್ದು, ತೆರವಾದ ಹುದ್ದೆಗಳಿಗೆ ವೈದ್ಯರನ್ನು ನೇಮಕಗೊಳಿಸದೇ ಗ್ರಾಮೀಣ ಪ್ರದೇಶದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾಸಂಘಟನಾ ಸಂಚಾಲಕ ನಂಜುಂಡ ಮಾತನಾಡಿ, ತಾಲ್ಲೂಕಿಗೆ ಮಕ್ಕಳ ವೈದ್ಯರು, ಫಿಜಿಶಿಯನ್ ಮತ್ತು ಪ್ರಸೂತಿ ತಜ್ಞರ ಸೆವೆ ಅತ್ಯಗತ್ಯವಾಗಿದ್ದೂ, ಕೂಡಲೇ ಸರ್ಕಾರ ಮೇಲಿನ ವೈದ್ಯರ ನೇಮಕ್ಕೆ ಕ್ರಮ ತೆಗೆದುಕೊಳ್ಳಬೇಕು. ಎಂಜಿಎಂ ಆಸ್ಪತ್ರೆಯಲ್ಲಿರುವ ಆಂಬುಲೆನ್ಸ್ ಹಳೆಯದಾಗಿದ್ದು, ಹೊಸ ಆಂಬುಲೆನ್ಸ್ ನೀಡಬೇಕು, ಆಸ್ಪತ್ರೆಯಲ್ಲಿ ಕೊರತೆಯಿರುವ ದಾದಿಯರು, ಲ್ಯಾಬ್ ಟೆಕ್ನಿಷಿಯನ್, ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಬೇಕು.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೆಕು ಎಂದರು. ದಾನಿಗಳ ನೆರವಿನಲ್ಲಿ ನಿರ್ಮಿಸಿರುವ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳದಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಪಟ್ಟಣದ ಸ್ವತಃಶ್ಚಲಿ, ಸ್ವಾಭಿಮಾನಿ, ಜನ್ನಾಪುರದ ಜೈಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು ಬೆಂಬಲ ನೀಡಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಹಂಡಗುಳಿ ರಜಾಕ್, ಚಂದ್ರಶೇಖರ್, ಮಂಜುನಾಥ್ ಮಾತನಾಡಿದರು. ರಾಮು, ಹರೀಶ್, ಟ್ರಾಕ್ಸ್ ರಮೇಶ್, ಮಂಜುನಾಥ್, ಬಿದ್ರಹಳ್ಳಿ ಪ್ರಶಾಂತ್, ಸುಧೀರ್, ರಮೇಶ್, ಹರೀಶ್ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry