ವೈದ್ಯರ ನೇರ ನೇಮಕಾತಿಗೆ ಸಂಪುಟದಲ್ಲಿ ನಿರ್ಧಾರ

7

ವೈದ್ಯರ ನೇರ ನೇಮಕಾತಿಗೆ ಸಂಪುಟದಲ್ಲಿ ನಿರ್ಧಾರ

Published:
Updated:

ಲಕ್ಷ್ಮೇಶ್ವರ: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ 1300 ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕೇವಲ 800 ವೈದ್ಯರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 500 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರಿ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಅವಶ್ಯಕತೆ ಇರುವುದನ್ನು ಮನಗಂಡಿರುವ ಸರ್ಕಾರ ತಜ್ಞ ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳುವ ಕಾನೂನಿಗೆ ವಿಶೇಷ ತಿದ್ದುಪಡಿ ತರಲು ಇಂದು ಜರುಗಲಿರುವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.ರಾಜ್ಯದಲ್ಲಿ ಹಬ್ಬಿರುವ ಮಾಟ ಮಂತ್ರದ ವಿಷಯವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ‘ಉನ್ನತ ಹುದ್ದೆಯಲ್ಲಿ ಇರುವ ಯಾರೇ ಆಗಲಿ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. ನಾನು ಮಾಟ ಮಂತ್ರವನ್ನು ನಂಬುವುದಿಲ್ಲ’ ಎಂದರು.ಶಾಸಕ ರಾಮಣ್ಣ ಲಮಾಣಿ, ಬಿಜೆಪಿ ಹಿರಿಯ ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ, ಮಾಜಿ ಶಾಸಕ ಎಸ್.ಎನ್. ಪಾಟೀಲ, ವೀರಣ್ಣ ಪವಾಡದ, ಸೋಮಣ್ಣ ಡಾಣಗಲ್, ಶಿವರಾಜಗೌಡ ಪಾಟೀಲ, ಈರಣ್ಣ ಕಾಯಿಶೆಟ್ಟರ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry